ಅಮೆರಿಕದಲ್ಲಿ ಹಾಟ್‌ ಏರ್‌ ಬಲೂನ್‌ ಕ್ರ್ಯಾಶ್:‌ ನಾಲ್ಕು ಮಂದಿ ಬಲಿ!

masthmagaa.com:

ಅಮೆರಿಕದ ಆರಿಜೋ಼ನಾ ರಾಜ್ಯದಲ್ಲಿ ಹಾಟ್‌ ಏರ್‌ ಬಲೂನ್‌ ಅಥ್ವಾ ಆಕಾಶ ಬುಟ್ಟಿ ಕ್ರ್ಯಾಶ್‌ ಆಗಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದ್ರಲ್ಲಿ ಬಲೂನ್‌ ಕಂಟ್ರೋಲ್‌ ಮಾಡೋ ಪೈಲಟ್‌ ಕೂಡ ಸೇರಿದ್ದಾನೆ. ಅಲ್ಲದೆ 7 ಮಂದಿ ಸ್ಕೈ ಡೈವರ್‌ಗಳು ಬುಟ್ಟಿಯಿಂದ ಜಂಪ್‌ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಅಂದ್ಹಾಗೆ ಇದ್ರಲ್ಲಿದ್ದ ಎಲ್ರೂ ಸ್ಕೈ ಡೈವಿಂಗ್‌ ಮಾಡೋಕಂತಾನೆ ಬಲೂನ್‌ನಲ್ಲಿ ಮೇಲೆ ಹೋಗಿದ್ರು. ಆದ್ರೆ ಮೃತಪಟ್ಟೋರು ಯಾಕೆ ಡೈವ್‌ ಮಾಡ್ಲಿಲ್ಲ. ಬಲೂನ್‌ ಯಾಕೆ ಕ್ರ್ಯಾಶ್‌ ಆಯ್ತು ಅನ್ನೋ ವಿಚಾರ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply