ಇಮ್ರಾನ್ ಖಾನ್​​ ರಾಜೀನಾಮೆಗೆ ಮಿಲಿಟರಿ ಒತ್ತಾಯ?

masthmagaa.com:

ಮತ್ತೊಂದ್ಕಡೆ ಪಾಕಿಸ್ತಾನ್‌ ಪಿಎಂ ಚೇರ್ ಮೇಲಿನ ಹಿಡಿತ ಇಮ್ರಾನ್‌ ಖಾನ್ ಕೈಯಿಂದ ಕ್ಷಣ ಕ್ಷಣಕ್ಕೂ ಸಡಿಲವಾಗ್ತಿದೆ. ಈ ಸಂದರ್ಭದಲ್ಲೇ ಪಾಕ್‌ ಆರ್ಮಿ ಚೀಫ್‌ ಹಾಗು ಇಮ್ರಾನ್‌ ಭೇಟಿ ಪಾಕ್‌ ರಾಜಕೀಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಕೆಲವರು ಇಮ್ರಾನ್‌ ಖಾನ್​​​ರನ್ನ ರಾಜೀನಾಮೆ ನೀಡುವಂತೆ ಸೇನೆ ಒತ್ತಾಯ ಮಾಡ್ತಿದೆ ಅನ್ನೋ ಥಿಯರಿಗಳನ್ನ ಮುಂದಿಡ್ತಿದ್ದಾರೆ. ಆದ್ರೆ ಇದನ್ನ ಅಲ್ಲಗಳೆದಿರುವ ಪಾಕ್‌ ಸಚಿವ ಫವಾದ್‌ ಚೌಧರಿ “ಅದೆಲ್ಲಾ ಸುಳ್ಳು.. ಆರ್ಮಿ ರಾಜೀನಾಮೆ ನೀಡುವಂತೆ ಕೇಳಿಯೂ ಇಲ್ಲ, ಪಾಕ್‌ ಇಮ್ರಾನ್‌ ಖಾನ್‌ ರಾಜೀನಾಮೆ ನೀಡೋದೂ ಇಲ್ಲ ಅಂತ ಹೇಳಿದ್ದಾರೆ. ಅಲ್ದೇ ಪ್ರಸ್ತುತ ಪಾಕ್‌ ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅವರು, 1992ರ ಸಮಯದಲ್ಲಿಇಮ್ರಾನ್‌ ಖಾನ್‌ ಕ್ರಿಕೆಟ್​​​​​ನಲ್ಲಿ ವಲ್ಡ್‌ ಕಪ್‌ ಗೆದ್ದಂತೆ ಇದನ್ನು ಕೂಡ ಗೆಲ್ತಾರೆ ಅಂತ ಫುಲ್‌ ಕಾನ್ಫಿಡೆಂಟ್‌ ಆನ್ಸರ್‌ ಕೊಟ್ಟಿದ್ದಾರೆ. ಆ ಮೂಲಕ ಇದೇ ಸೋಮವಾರ ಮಂಡನೆಯಾಗಲಿರುವ ಅವಿಶ್ವಾಸ ನಿರ್ಣಯದ ವಿರುದ್ದ ಇಮ್ರಾನ್ ಗೆಲ್ಲಲಿದ್ದಾರೆ ಅಂತ ಫವಾದ್‌ ವಿಶ್ವಾಸದ ಮಾತಾಡಿದ್ದಾರೆ. ಆದ್ರೆ ಇಮ್ರಾನ್ ಖಾನ್ ಮಾತ್ರ ಅವಿಶ್ವಾಸ ನಿರ್ಣಯ ಮತದಾನ ತಡೆಯುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

-msthmagaa.com

Contact Us for Advertisement

Leave a Reply