ಭಾರತಕ್ಕೆ ನುಸುಳಲು ಪಾಕ್ ಸೇನೆ ಸಹಾಯ: ಬಾಯಿಬಿಟ್ಟ ಉಗ್ರ

masthmagaa.com:

ಉಗ್ರರು ಲೈನ್ ಆಫ್ ಕಂಟ್ರೋಲ್​​ನಲ್ಲಿ ಗಡಿನುಸುಳಲು ನಿರಂತರವಾಗಿ ಯತ್ನಿಸುತ್ತಲೇ ಇರ್ತಾರೆ. ಅವರಿಗೆ ಪಾಕ್​ ಗುಪ್ತಚರ ಸಂಸ್ಥೆ ಐಎಸ್​​ಐ ಕೂಡ ಸಹಕರಿಸ್ತಿದೆ. ಕಳೆದ ತಿಂಗಳು ಇದೇ ರೀತಿಯ ಪ್ರಯತ್ನವನ್ನು ವಿಫಲಗೊಳಿಸಿದ ಯೋಧರು ಉರಿಯಲ್ಲಿ ಓರ್ವ ಉಗ್ರನನ್ನು ಅರೆಸ್ಟ್ ಮಾಡಿದ್ದಾರೆ. ಆತನ ಹೆಸರು ಬಾಬರ್ ಅಲಿ ಅಂತ ಗುರುತಿಸಲಾಗಿದ್ದು, ನಿರಂತರವಾಗಿ ವಿಚಾರಣೆ ನಡೆಸಲಾಗ್ತಿದೆ. ಇದೀಗ ಈ ಪ್ರಕರಣದ ತನಿಖೆಯನ್ನು ಎನ್​ಐಎ ವಹಿಸಿಕೊಳ್ಳಲಿದೆ ಅಂತ ಮೂಲಗಳು ತಿಳಿಸಿವೆ. ಈಗಾಗಲೇ ಬಾಬರ್ ಅಲಿ ಗಡಿ ನುಸುಳಲು ಪಾಕಿಸ್ತಾನ ಸೇನೆ ಸಹಾಯ ಮಾಡ್ತಿದೆ ಅನ್ನೋದನ್ನ ಒಪ್ಪಿಕೊಂಡಿದ್ದಾನೆ.

-masthmagaa.com

Contact Us for Advertisement

Leave a Reply