ಡಿಸೆಂಬರ್‌ಗೆ ಮತೊಮ್ಮೆ ಚಂದ್ರಲೋಕಕ್ಕೆ ಹಾರಲಿರೊ ನಾಸಾ!

masthmagaa.com:

ಇಸ್ರೋದ ಚಂದ್ರಯಾನ-3ರ ಸಕ್ಸಸ್‌ ನಂತ್ರ ಮತ್ತೊಮ್ಮೆ ಜಾಗತಿಕ ಸ್ಪೇಸ್‌ ಏಜೆನ್ಸಿಗಳು ಚಂದ್ರನ ಕಡೆ ತಿರುಗಿವೆ. USನ ಬಾಹ್ಯಾಕಾಶ ಸಂಸ್ಥೆ ನಾಸಾದ ಆರ್ಟೆಮಿಸ್‌ ಪ್ರೋಗ್ರಾಂ ಸಹ ವೇಗ ಪಡೆದುಕೊಂಡಿದೆ. ಡಿಸೆಂಬರ್‌ 24ಕ್ಕೆ ಆಸ್ಟ್ರೋಬಾಟಿಕ್‌ ಟೆಕ್ನಾಲಜಿ ಎಂಬ ರೊಬೊಟಿಕ್‌ ಕಂಪನಿ ನಿರ್ಮಿಸಿರೊ ʻಪೆರಿಗ್ರೀನ್‌ʼ ಲ್ಯಾಂಡರ್‌ನ್ನ ನಾಸಾ ಚಂದ್ರನ ಅಂಗಳಕ್ಕೆ ಕಳಿಸಲಿದೆ. ಯುನೈಟೆಡ್‌ ಲಾಂಚ್‌ ಅಲಯನ್ಸ್‌ನ ಅತ್ಯಾಧುನಿಕ ವುಲ್ಕಾನ್‌ ರಾಕೆಟ್‌ನ ಮೊದಲ ಮಿಷನ್‌ ಇದಾಗಲಿದೆ. ಅಂದ್ಹಾಗೆ ಆರ್ಟೆಮಿಸ್‌ ಪ್ರೋಗ್ರಾಂನಲ್ಲಿ ಮಾನವರನ್ನ ಮತ್ತೊಮ್ಮೆ ಚಂದ್ರಲೋಕಕ್ಕೆ ಕಳಿಸಿ, ಸಂಶೋಧನೆ, ವೈಜ್ಞಾನಿಕ ಅನ್ವೇಷಣೆ ನಡೆಸೋಕೆ ನಾಸಾ ಪ್ಲಾನ್‌ ಮಾಡಿದೆ. ತನ್ನ ಕಮರ್ಷಿಯಲ್‌ ಲೂನಾರ್‌ ಪೇಲೋಡ್‌ ಸರ್ವೀಸ್‌(CLPS) ಮೂಲಕ ಹಲವು ಕಂಪನಿಗಳ ಉಪಕರಣಗಳನ್ನ ಚಂದ್ರನ ಮೇಲೆ ಡೆಲಿವರಿ ಮಾಡೋಕೆ ನಾಸಾ ಮುಂದಾಗಿದೆ.

-masthmagaa.com

Contact Us for Advertisement

Leave a Reply