ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ! ಸುಪ್ರೀಂಕೋರ್ಟ್‌ ಹೇಳಿದ್ದೇನು?

masthmagaa.com:

ಜಮ್ಮು-ಕಾಶ್ಮೀರದಲ್ಲಿ ರದ್ಧಾಗಿರುವ 370ನೇ ವಿಧಿ ವಿರುದ್ಧ ಸಲ್ಲಿಸಿರೊ ಅರ್ಜಿಗಳ ವಿಚಾರಣೆಯನ್ನ ಇಂದು ಕೂಡ ಸುಪ್ರೀಂಕೋರ್ಟ್‌ ಮುಂದುವರೆಸಿದೆ. ಈ ವೇಳೆ ಜಮ್ಮು -ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿಸಲು ಸಮಯದ ಚೌಕಟ್ಟು ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ರಾಜ್ಯವನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಬಹುದಾ? ಅದೇ ರೀತಿ ಕೇಂದ್ರಾಡಳಿತ ಪ್ರದೇಶವೊಂದು ರಾಜ್ಯವಾಗಬಹುದಾ ಅಂತ ಪ್ರಶ್ನಿಸಿದೆ. ಇದಕ್ಕೆ ಕೇಂದ್ರದ ಪರವಾಗಿ ಉತ್ತರಿಸಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಜಮ್ಮು – ಕಾಶ್ಮೀರವನ್ನ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ್ದು ತಾತ್ಕಾಲಿಕ ಕ್ರಮವಾಗಿದೆ. ಭವಿಷ್ಯದಲ್ಲಿ ಜಮ್ಮು – ಕಾಶ್ಮೀರ ವಾಪಸ್ ರಾಜ್ಯದ ಸ್ಥಾನಮಾನ ಪಡೆದುಕೊಳ್ಳಲಿದೆ ಅಂತ ಹೇಳಿದ್ದಾರೆ. ಅಷ್ಟೆ ಅಲ್ದೆ ನಾವು ಸುಪ್ರೀಂಕೋರ್ಟ್‌ ಸೂಚನೆಗಳನ್ನ ಪರಿಗಣಿಸಿದ್ದು, ಆಗಸ್ಟ್‌ 31ರಂದು ಈ ಬಗ್ಗೆ ಸರ್ಕಾರದ ಬಳಿ ಸಭೆ ನಡೆಸಿ ತಿಳಿಸಲಿದ್ದೇನೆ. ಆದ್ರೆ ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply