ದೆಹಲಿಯಲ್ಲಿ ವಿಶ್ವದರ್ಜೆಗೇರಿಸಲು ಕೇಜ್ರಿವಾಲ್ ಪಣ! ಡೆಲ್ಲಿ@2047ಕ್ಕೆ ಚಾಲನೆ

masthmagaa.com:

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇವತ್ತು ಡೆಲ್ಲಿ@2047 ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ರಾಷ್ಟ್ರರಾಜಧಾನಿ ದೆಹಲಿಯನ್ನು 2047ರ ವೇಳೆಗೆ ವಿಶ್ವದರ್ಜೆಯ ನಗರವನ್ನಾಗಿ ಮಾಡೋದು ಇದ್ರ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಮಾತನಾಡಿದ ಕೇಜ್ರಿವಾಲ್​​, ಖಾಸಗಿ ವಲಯ ಮತ್ತು ಸಮಾಜ ಸೇವಾ ಸಂಘಟನೆಗಳು ಡೆಲ್ಲಿ2047ಕ್ಕೆ ಸಹಕರಿಸಿ, ದೆಹಲಿಯನ್ನು ವಿಶ್ವದಲ್ಲೇ ನಂಬರ್​ 1 ಮಾಡಲು ಸಹಕರಿಸಬೇಕು ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ದೆಹಲಿ ಶಾಸಕರ ವೇತನವನ್ನು 30 ಸಾವಿರಕ್ಕೆ ಏರಿಸಲಾಗಿದೆ. 54 ಸಾವಿರಕ್ಕೆ ಏರಿಸಬೇಕು ಅಂತ ಶಾಸಕರು ಒತ್ತಾಯಿಸಿದ್ರು. ಆದ್ರೆ ಗೃಹ ಇಲಾಖೆ ಮೂಲ ವೇತನವನ್ನು 30 ಸಾವಿರಕ್ಕೆ ಹೆಚ್ಚಿಸಿದ್ದು, ಈ ಮೂಲಕ ಅಲೋವೆನ್ಸ್ ಅದು ಇದು ಅಂತ ಎಲ್ಲಾ ಸೇರಿ ದೆಹಲಿ ಶಾಸಕರ ಸ್ಯಾಲರಿ 90 ಸಾವಿರ ಆಗಲಿದೆ.

-masthmagaa.com

Contact Us for Advertisement

Leave a Reply