ಆರ್ಯನ್ ಖಾನ್ ಅರೆಸ್ಟ್ ಆದಾಗ ಎನ್​ಸಿಬಿ ಜೊತೆ ಬಿಜೆಪಿ ನಾಯಕ ಇದ್ರಾ..?

masthmagaa.com:

ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಅರೆಸ್ಟ್ ಆಗೋ ಹೊತ್ತಲ್ಲಿ ಬಿಜೆಪಿ ನಾಯಕ ಮತ್ತು ಓರ್ವ ಪ್ರೈವೇಟ್ ಡಿಟೆಕ್ಟಿವ್ ಇದ್ದಿದ್ದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬಿಜೆಪಿ ನಾಯಕ ಮನೀಶ್ ಬಾನುಶಾಲಿ ಮತ್ತು ಡಿಟೆಕ್ಟಿವ್ ಕೆಪಿ ಗೊಸಾವಿ ಎನ್​ಸಿಬಿ ಕಚೇರಿಗೆ ಹೋಗ್ತಿರೋ ದೃಶ್ಯಗಳನ್ನು ಎನ್​ಸಿಪಿ ನಾಯಕ, ಮಹಾರಾಷ್ಟ್ರದಲ್ಲಿ ಸಚಿವರಾಗಿರೋ ನವಾಬ್ ಮಲ್ಲಿಕ್ ಶೇರ್ ಮಾಡಿದ್ದಾರೆ. ಜೊತೆಗೆ ಇವರಿಬ್ಬರಿಗೆ ಎನ್​ಸಿಬಿ ಕಚೇರಿಯಲ್ಲಿ ಏನ್ ಕೆಲ್ಸ ಅಂತ ಪ್ರಶ್ನಿಸಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ ನಾಯಕ ಮನೀಶ್ ಬಾನುಶಾಲಿ, ಈ ಬಂಧನಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಈ ರೇಡ್ ವೇಳೆ ನನಗೆ ಹೊಸ ಹೊಸ ಮಾಹಿತಿ ಬರ್ತಿತ್ತು. ಹೀಗಾಗಿ ನಾನು ಎನ್​ಸಿಬಿ ಅಧಿಕಾರಿಗಳ ಜೊತೆಗಿದ್ದೆ. ರೇಡ್ ಮುಗಿದ ಬಳಿಕ ನನ್ನ ಬಳಿ ಸಾಕ್ಷಿಯಾಗಿ ಹೇಳಿಕೆ, ಸಹಿ ಪಡೆದು ನನ್ನ ಬಿಟ್ಟು ಕಳುಹಿಸಲಾಯ್ತು.. ಅಷ್ಟೆ.. ಬೇರೇನೂ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply