ಜೈಲಿಂದಲೇ ಶಾರೂಖ್​ ಖಾನ್​​ಗೆ ಆರ್ಯನ್ ವಿಡಿಯೋ ಕಾಲ್

masthmagaa.com:

ಮಾದಕ ವಸ್ತು ಕೇಸ್​​ನಲ್ಲಿ ಜೈಲು ಪಾಲಾಗಿರೋ ಬಾಲಿವುಡ್ ಬಾದ್​​ಶಾ ಶಾರೂಖ್ ಮಗ ಆರ್ಯನ್ ಖಾನ್​​ಗೆ ನಾಲ್ಕೂವರೆ ಸಾವಿರ ರೂಪಾಯಿ ಮನಿ ಆರ್ಡರ್ ಸಿಕ್ಕಿದೆ. ಶಾರೂಖ್ ಖಾನ್​​ ಮನೆಯಿಂದ ಈ ಮನಿ ಆರ್ಡರ್ ಕಳುಹಿಸಲಾಗಿದೆ. ಈ ದುಡ್ಡನ್ನು ಆರ್ಯನ್ ಖಾನ್ ಆರ್ಥರ್ ರೋಡ್​ ಜೈಲಿನಲ್ಲಿ ಊಟ ಸೇರಿದಂತೆ ಬೇರೆ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಬಳಸಿಕೊಳ್ಳಬಹುದಾಗಿದೆ. ಜೈಲಿನಲ್ಲಿರೋ ಖೈದಿಗಳಿಗೆ ಹೊರಗಿನಿಂದ ಹೆಚ್ಚು ಅಂದ್ರೆ ನಾಲ್ಕೂವರೆ ಸಾವಿರ ರೂಪಾಯಿ ಮನಿ ಆರ್ಡರ್ ರೀತಿಯಲ್ಲಿ ನೀಡಲು ಅವಕಾಶವಿದೆ. ಜೊತೆಗೆ ಆರ್ಯನ್ ಖಾನ್​​​​ಗೆ 10 ನಿಮಿಷಗಳ ಕಾಲ ವಿಡಿಯೋ ಕಾಲ್​ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಇತ್ತೀಚೆಗೆ ಹೈಕೋರ್ಟ್​​ ಕೊರೋನಾ ಹಿನ್ನೆಲೆಯಲ್ಲಿ ಜೈಲಿನಲ್ಲಿರೋ ಖೈದಿಗಳು ವಾರಕ್ಕೆ 2 ಬಾರಿ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಲು ಪರ್ಮೀಷನ್ ಕೊಡಬೇಕು ಅಂತ ಆದೇಶಿಸಿತ್ತು. ಅದರಂತೆ ಆರ್ಯನ್​ ಖಾನ್​ಗೂ ಅವಕಾಶ ಮಾಡಿಕೊಡಲಾಗಿದೆ. ಮನಿ ಆರ್ಡರ್ ಸೋಮವಾರ ಸಿಕ್ಕಿದ್ರೆ, ನಿನ್ನೆ ವಿಡಿಯೋ ಕಾಲ್​ನಲ್ಲಿ ಮಾತಾಡಿದ್ದಾರೆ. ಜೈಲಿನ ಸೂಪರಿಂಟೆಂಡೆಂಟ್​​ ನಿತಿನ್ ವಾಯ್ಚಲ್ ಮಾತನಾಡಿ, ಆರ್ಯನ್ ಖಾನ್​ಗೆ ಜೈಲಿನ ಊಟವನ್ನೇ ನೀಡಲಾಗ್ತಿದೆ. ಸ್ಟಾರ್ ಮಗ ಅಂತ ಮನೆ ಅಥವಾ ಹೊರಗಿನ ಆಹಾರ ನೀಡ್ತಿಲ್ಲ. ಕೋರ್ಟ್​ ಆದೇಶದವರೆಗೆ ಅದಕ್ಕೆ ಅವಕಾಶವಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿರೋ ಕೋರ್ಟ್​ ಅಕ್ಟೋಬರ್ 20ಕ್ಕೆ ತೀರ್ಪು ಕಾಯ್ದಿರಿಸಿದೆ. ಅಲ್ಲಿಯವರೆಗೆ ಆರ್ಯನ್ ಖಾನ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.)

ಇನ್ನು ಆರ್ಯನ್ ಖಾನ್ ನಿರಂತರವಾಗಿ ಮಾದಕ ವಸ್ತು ಸೇವಿಸ್ತಿದ್ರು. ಮಾದಕ ವಸ್ತುಗಳಿಗೆ ಸಂಬಂಧಿಸಿದ ಸಂಪರ್ಕ ಪತ್ತೆಹಚ್ಚಲು ವಿದೇಶಾಂಗ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೀವಿ ಅಂತ ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply