ಅಮೆರಿಕ ವಾಯುನೆಲೆ ಮೇಲೆ ಮತ್ತೊಮ್ಮೆ ದಾಳಿ! ಬೈಡನ್‌ ವಾರ್ನಿಂಗ್‌ಗೆ ಕೌಂಟರ್?

masthmagaa.com:

ಇರಾಕ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಕಡೆಗೆ ಮತ್ತೊಮ್ಮೆ ರಾಕೆಟ್‌ ದಾಳಿ ನಡೆಸಲಾಗಿದೆ. ಪಶ್ಚಿಮ ಇರಾಕ್‌ನ ʻಅಯಿನ್‌ ಅಲ್-ಅಸಾದ್‌ʼ ಏರ್‌ ಬೇಸ್‌ ಕಡೆಗೆ 25 ಕಿಲೋಮೀಟರ್‌ ದೂರದ ಮರುಭೂಮಿಯಿಂದ 4 ರಷ್ಯಾ ನಿರ್ಮಿತ ʻಕಟ್ಯುಶಾʼ ರಾಕೆಟ್‌ಗಳನ್ನ ಹಾರಿಸಲಾಗಿದೆ. ಆದ್ರೆ ಎಲ್ಲಾ ರಾಕೆಟ್‌ಗಳು ವಾಯು ನೆಲೆಯಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದು, ಯಾರಿಗೂ ಹಾನಿಯಾಗಿಲ್ಲ. ಹಲವು ದಿನಗಳಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಸ್ಟೇಟ್‌ ಸೆಕ್ರೆಟರಿ ಆಂಟನಿ ಬ್ಲಿಂಕನ್‌ ಈ ಬಗ್ಗೆ ವಾರ್ನಿಂಗ್‌ ಕೊಡ್ತಾನೆ ಇದಾರೆ. ಆದ್ರೆ ಇರಾನ್‌ ಜೊತೆಗೂಡಿರೊ ಇರಾಕ್‌ ಸಶಸ್ತ್ರ ಗುಂಪುಗಳು ನೀವೆಷ್ಟೇ ಗಂಟಲು ಅರಚಿಕೊಂಡ್ರು ನಾವ್‌ ಕೇರ್‌ ಮಾಡೊಲ್ಲ ಅಂತ ಮೆಸೇಜ್‌ ನೀಡಿದ್ದಾರೆ. ಅಂದ್ಹಾಗೆ ಇಸ್ರೇಲ್‌ಗೆ ಸಪೋರ್ಟ್‌ ಮಾಡ್ತಿರೊ ಅಮೆರಿಕ ವಿರುದ್ಧ ಮಿಡ್ಲ್‌ ಈಸ್ಟ್‌ನಲ್ಲಿ ಅಸಮಾಧಾನ ಇದ್ದು, ಅಲ್ಲಿರೊ ಅಮೆರಿಕನ್‌ ಪಡೆಗಳ ಮೇಲೆ ಇದು ನೇರ ಪರಿಣಾಮ ಬೀರ್ತಿದೆ.

-masthmagaa.com

Contact Us for Advertisement

Leave a Reply