ಇಂಗ್ಲೆಂಡ್‌: ಮಕ್ಕಳ ಜನನ ದರ ಕಳೆದ 20 ವರ್ಷದಲ್ಲೇ ಇಳಿಕೆ

masthmagaa.com:

ಕಳೆದ 20 ವರ್ಷದಲ್ಲೇ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಮಕ್ಕಳ ಜನನ 2022ರಲ್ಲಿ ಕನಿಷ್ಠವಾಗಿದೆ ಅಂತ ತಿಳಿದು ಬಂದಿದೆ. ಆದರೆ ಜನಿಸಿರೋ ಮಕ್ಕಳಲ್ಲಿ ವಿದೇಶಿ ಮೂಲದ ಅಂದ್ರೆ ನಾನ್‌ ಯುಕೆ ಪೋಷಕರಿಗೆ ಜನಿಸಿರೋ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಅಂತ ಹೇಳಲಾಗಿದೆ. 2022ರಲ್ಲಿ ಜನಿಸಿದ ಒಟ್ಟು ಮಕ್ಕಳಲ್ಲಿ 23.1% ವಿದೇಶಿ ಮೂಲದ ಪೋಷಕರಿಗೆ ಜನಿಸಿವೆ. 2021ರಲ್ಲಿ ಈ ಪರ್ಸಂಟೇಜ್‌ 21.5% ಇತ್ತು. ಇನ್ನು ಒಟ್ಟು ಮಕ್ಕಳ ಜನನದಲ್ಲಿ 60.3% ಮಕ್ಕಳು ಬ್ರಿಟಿಷ್‌ ಪೋಷಕರಿಗೆ ಜನಿಸಿವೆ, ಇದು 2021ರಲ್ಲಿ 62% ಇತ್ತು ಎನ್ನಲಾಗಿದೆ. ಇತ್ತ ಯುಕೆಯಲ್ಲಿ ಇಳಿಕೆಯಾಗ್ತಿರೊ ಜನನ ದರಕ್ಕೆ ವಿದೇಶಿ ಪೋಷಕರ ಮಕ್ಕಳ ಸಂಖ್ಯೆ ಮಹತ್ವದ ಕೊಡುಗೆ ನೀಡುತ್ತೆ. ಆದ್ರೆ ಒಟ್ಟಾರೆ ಜನನ ದರ ಕಳವಳಕಾರಿಯಾಗಿದೆ ಅಂತ ಲಂಡನ್‌ ಕಿಂಗ್ಸ್‌ ಕಾಲೇಜ್‌ನ ಎಕನಾಮಿಕ್ಸ್‌ ಪ್ರೊಫೆಸರ್‌ ಜೊನಾಥನ್‌ ಪೋರ್ಸ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply