ಬಾಂಗ್ಲಾದೇಶ ಹಾಗೂ ಮಯನ್ಮಾರ್‌ಗೆ ಮೋಚಾ ಬೆದರಿಕೆ! 5 ಲಕ್ಷ ಜನರ ಸ್ಥಳಾಂತರ!

masthmagaa.com:

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರೊ ಮೋಚಾ ಸೈಕ್ಲೋನ್‌ ಬಾಂಗ್ಲಾದೇಶ ಹಾಗೂ ಮಯನ್ಮಾರ್‌ನಲ್ಲಿ ಹೆಚ್ಚಿನ ಬೆದರಿಕೆ ಉಂಟು ಮಾಡಿದೆ. ಪ್ರತಿ ಗಂಟೆಗೆ 160 ಕಿಲೋ ಮೀಟರ್‌ ವೇಗದ ಗಾಳಿಯೊಂದಿಗೆ ನಾಳೆ ಚಂಡಮಾರುತ ಅಪ್ಪಳಿಸಲಿದೆ ಅಂತ ನಿರೀಕ್ಷಿಸಲಾಗಿದೆ. ಹೀಗಾಗಿ ಬಾಂಗ್ಲಾದೇಶದ ಕಡಲ ತೀರದಲ್ಲಿರೊ ಸುಮಾರು 5 ಲಕ್ಷ ಜನರನ್ನ ಇಂದಿನಿಂದಲೇ ಸ್ಥಳಾಂತರ ಮಾಡಲಾಗುತ್ತೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅಲ್ದೇ ಮಯನ್ಮಾರ್‌ನಿಂದ ಪಲಾಯನ ಮಾಡಿ ಬಾಂಗ್ಲಾಕ್ಕೆ ಬಂದಿರೊ ರೋಹಿಂಗ್ಯಾ ನಿರಾಶ್ರಿತರ ಕ್ಯಾಂಪ್‌ಗಳಿಗು ಕೂಡ ಸೈಕ್ಲೋನ್‌ನಿಂದ ಬೆದರಿಕೆಯಿದೆ ಅಂತ ಅಂತಾರಾಷ್ಟ್ರೀಯ ರಕ್ಷಣಾ ಸಮಿತಿಯೊಂದು ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply