ಮೋಹನ್ ಭಾಗವತ್ ವಿರುದ್ದ ಅಸಾದುದ್ದೀನ್ ಓವೈಸಿ ಕೆಂಡ

ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕೆಂಡಕಾರಿದ್ದಾರೆ. ಗುಂಪು ಹತ್ಯೆ ಬಗ್ಗೆ ಮೋಹನ್ ಭಾಗವತ್ ನೀಡಿರೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಯಾವ ವಿಚಾರಧಾರೆ ಮಹಾತ್ಮ ಗಾಂಧಿ ಮತ್ತು ತಬರೇಜ್ ನನ್ನು ಕೊಲೆ ಮಾಡಿತೋ..? ಆ ವಿಚಾರಧಾರೆಯಿಂದ ಭಾರತಕ್ಕೆ ಆದಷ್ಟು ಅವಮಾನ ಬೇರೆ ಯಾವುದೇ ವಿಚಾರದಲ್ಲೂ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಮೋಹನ್ ಭಾಗವತ್ ಗುಂಪು ಹತ್ಯೆ ತಡೆಗೆ ಕ್ರಮ ಕೈಗೊಳ್ಳುವ ಮಾತನ್ನು ಆಡಲಿಲ್ಲ. ಬದಲಿಗೆ ಇದನ್ನು ಹತ್ಯೆ ಎಂದು ಕರೆಯಬೇಡಿ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಅಂತ ಓವೈಸಿ ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಆರ್‍ಎಸ್‍ಎಸ್ ವಾರ್ಷಿಕೋತ್ಸವ ಮತ್ತು ವಿಜಯದಶಮಿಯ ಅಂಗವಾಗಿ ಮಾತನಾಡಿದ್ದ ಮೋಹನ್ ಭಾಗವತ್, ಗುಂಪು ಹತ್ಯೆ ಅನ್ನೋದು ಪಾಶ್ಚಿಮಾತ್ಯ ಪದ. ಅದು ಬಂದಿರೋದು ವಿದೇಶದಿಂದ. ಯಾಕಂದ್ರೆ ಭಾರತದಲ್ಲಿ ಮೊದಲು ಇಂಥಹ ಘಟನೆಗಳೇ ನಡೆಯುತ್ತಿರಲಿಲ್ಲ. ಇದ್ರ ವಿರುದ್ಧ ಕಠಿಣ ಕಾನೂನು ತರಬೇಕು. ಆದ್ರೆ ಪ್ರತಿಸಾರಿ ಗುಂಪು ಹತ್ಯೆ ಆದಾಗಲೂ ಆರ್‍ಎಸ್‍ಎಸ್ ಹೆಸರು ತರೋದು ಸರಿಯಲ್ಲ ಎಂದಿದ್ದರು.

Contact Us for Advertisement

Leave a Reply