ದೇಶ ಬಿಡೋಕೂ ಮುನ್ನ ನಾನು ಸಾಯೋಕೆ ರೆಡಿ ಅಂದಿದ್ರಂತೆ ಅಶ್ರಫ್​​ ಘನಿ!

masthmagaa.com:

ತಾಲಿಬಾನಿಗಳು ಕಾಬೂಲ್​​ಗೆ ನುಗ್ತಿದ್ದಂತೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಫಾರಿನ್​ಗೆ ಓಡಿಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೀಗ ಹೀಗೆ ಹೋಗೋಕೂ ಒಂದು ದಿನ ಮುನ್ನ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್ ಜೊತೆಗೆ ಮಾತನಾಡಿದ್ದ ಅವರು, ನಾನು ಕೊನೆಯವರೆಗೂ ಹೋರಾಡ್ತೀನಿ ಅಂತ ಹೇಳಿದ್ರಂತೆ.. ಹೀಗಂತ ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮ ಟೋಲೋ ನ್ಯೂಸ್​​ಗೆ ಅಂಟೋನಿ ಬ್ಲಿಂಕನ್​​​ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಟೋಲೋ ನ್ಯೂಸ್ ಮಾಧ್ಯಮದವರು, ಅಶ್ರಫ್ ಘನಿ ಯುಎಇಗೆ ಪಲಾಯನ ಮಾಡಲು ನೀವು ಹೆಲ್ಪ್ ಮಾಡಿದ್ರ ಅಂತ ಪ್ರಶ್ನಿಸಿದ್ರು. ಅದಕ್ಕೆ ಪ್ರತಿಕ್ರಿಯಿಸಿರೋ ಅಂಟೋನಿ, ಒಂದು ದಿನ ಹಿಂದೆ ಮಾತನಾಡಿದ್ದ ಅಶ್ರಫ್ ಘನಿ ಸಾಯೋವರೆಗೆ ಹೋರಾಟ ನಡೆಸಲು ಸಿದ್ಧತೆ ನಡೆಸ್ತಿದ್ದೀನಿ ಅಂತ ಹೇಳಿದ್ರು ಅಂತ ಹೇಳಿದ್ದಾರೆ.

ಇನ್ನು ಟ್ವಿಟ್ಟರ್​​ನಲ್ಲಿ ಒಂದು ಉದ್ದವಾದ ಸ್ಟೇಟ್ಮೆಂಟ್ ಪೋಸ್ಟ್​ ಮಾಡಿರೋ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ, ಇದನ್ನು ಬೇರೆ ಯಾವುದೇ ರೀತಿ ಅಂತ್ಯಗೊಳಿಸಲು ಸಾಧ್ಯವಿರಲಿಲ್ಲ. ನಾನು ಯಾಕೆ ದೇಶವನ್ನು ಬಿಟ್ಟು ಬಂದೆ ಅಂತ ನಾನು ಈಗಾಗಲೇ ಹೇಳಿದ್ದೀನಿ. ನಾನು ಅಲ್ಲೇ ಇದ್ದಿದ್ರೆ 1990ರ ದಶಕದಲ್ಲಿ ನಡೆದಂತೆ ಬೀದಿ ಬೀದಿಯಲ್ಲೂ ಗಲಾಟೆ ನಡೆಯುತ್ತೆ. ನಾಗರಿಕ ಯುದ್ಧ ನಡೆಯುತ್ತೆ ಅಂತ ಭದ್ರತಾ ಸಿಬ್ಬಂದಿ ಎಚ್ಚರಿಸಿದ್ರು. ಅದಕ್ಕೆ ನಾನು ದೇಶ ಬಿಟ್ಟು ಬಂದೆ. ಕಾಬೂಲ್​ನಿಂದ ಹೊರಬರೋದು ನನ್ನ ಜೀವನದಲ್ಲೇ ನನಗೆ ಕಷ್ಟದ ನಿರ್ಧಾರವಾಗಿತ್ತು. ಆದರೆ ಕಾಬೂಲ್​​ನ 60 ಲಕ್ಷ ಜನರ ರಕ್ಷಣೆ ಮತ್ತು ಬಂದೂಕುಗಳನ್ನು ಸೈಲೆಂಟ್ ಆಗಿಸಲು ಇದು ಅನಿವಾರ್ಯವಾಗಿತ್ತು ಅಂತ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply