ಪೆಟ್ರೋಲ್,​ ಡೀಸೆಲ್ ರೇಟು ಕಮ್ಮಿ ಮಾಡಿದ ಅಸ್ಸಾಂ.. ಬೇರೆ ರಾಜ್ಯಗಳ ಕಥೆ ಏನು?

masthmagaa.com:

ದೇಶದೆಲ್ಲೆಡೆ ಪೆಟ್ರೋಲ್ ಮತ್ತು ಡೀಸೆಲ್ ರೇಟು ಹೊಸ ದಾಖಲೆ ಬರೆಯುತ್ತಿರೋವಾಗಲೇ ಅಸ್ಸಾಂ ಸರ್ಕಾರ ಪ್ರತಿ ಲೀಟರ್​ ಪೆಟ್ರೋಲ್ ಮತ್ತು ಡೀಸೆಲ್​ ದರವನ್ನ 5 ರೂಪಾಯಿ ಕಮ್ಮಿ ಮಾಡಿದೆ. ಅಟ್​​ ದಿ ಸೇಮ್ ಟೈಂ ಮದ್ಯದ ಮೇಲಿನ ಸುಂಕವನ್ನ 25 ಪರ್ಸೆಂಟ್ ಕಮ್ಮಿ ಮಾಡಿ ‘ಎಣ್ಣೆ’ ಪ್ರಿಯರಿಗೂ ಗುಡ್​ ನ್ಯೂಸ್​​ ಕೊಟ್ಟಿದೆ. ಹೊಸ ರೇಟು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಸ್ಸಾಂನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸಿಎಂ ಸರ್ಬಾನಂದಾ ಸೋನೋವಾಲ್​ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲು ಎಲ್ಲಾ ಪ್ರಯತ್ನಗಳನ್ನ ಮಾಡ್ತಿದೆ. ಅದರ ಭಾಗವಾಗಿಯೇ ವಾಹನಗಳಿಗೆ ಹಾಕುವ ಎಣ್ಣೆ ಮತ್ತು ಹೊಟ್ಟೆಗೆ ಹಾಕುವ ಎಣ್ಣೆ ರೇಟನ್ನ ಕಮ್ಮಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply