ಅಸ್ಸಾಂ, ಮಿಝೋರಾಂ ಗಡಿ ವಿವಾದ ಬಗೆಹರಿಸಲು ನಾಳೆ ಮಾತುಕತೆ

masthmagaa.com:

ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ಸಂಘರ್ಷ ಬಗೆಹರಿಸಿಕೊಳ್ಳಲು ನಾಳೆಯಿಂದ ಮಾತುಕತೆ ಶುರುವಾಗಲಿದೆ. ಅಸ್ಸಾಂ ಮತ್ತು ಮಿಝೋರಾಂನ ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ನಿಯೋಗ ಭೇಟಿಯಾಗಿ, ಚರ್ಚಿಸಲಿದೆ. ಮಿಝೋರಾಂನ ಐಜಲ್ ಕ್ಲಬ್​ನಲ್ಲಿ ಈ ಭೇಟಿ ನಡೆಯಲಿದೆ ಅಂತ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ನಾಗಾಲ್ಯಾಂಡ್ ಸಿಎಂ ನೇಫ್ಯೂ ರಿಯೋ, 75ನೇ ಸ್ವಾತಂತ್ರ್ಯ ದಿನಾಚರಣೆಯ ಒಳಗಾಗಿ ಈಶಾನ್ಯ ರಾಜ್ಯಗಳ ನಡುವಿನ ಎಲ್ಲಾ ಗಡಿವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply