ಉತ್ತರ ಪ್ರದೇಶ ಚುನಾವಣೆ: ಇವತ್ತಿನ ಕಂಪ್ಲೀಟ್ ಅಪ್​ಡೇಟ್ ಇಲ್ಲಿದೆ..

masthmagaa.com:

ಸಮಾಜವಾದಿ ಪಕ್ಷದ ಮೀರತ್ ಅಭ್ಯರ್ಥಿ ರಫೀಕ್ ಅನ್ಸಾರಿ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಉಯತ್ತರ ಪ್ರದೇಶದಲ್ಲಿ ‘ಹಿಂದೂಗರ್ದಿ’ ಜಾಸ್ತಿಯಾಗಿದೆ ಅಂದಿದ್ದಾರೆ. ಹಿಂದೂಗರ್ದಿ ಅಂದ್ರೆ ‘ಹಿಂದೂಗಿರಿ’ ಅಂತ. ಅಷ್ಟೇ ಅಲ್ಲದೆ. ಮತ್ತೆ BJP ಅಧಿಕಾರಕ್ಕೆ ಬಂದರೆ ಅವರೆಲ್ಲ ಗೂಂಡಾಗಳಾಗಿ ಬದಲಾಗ್ತಾರೆ ಅಂತ ಹೇಳಿಕೆ ನೀಡಿದ್ದಾರೆ. ಇವರು ಒಂದು ಗುಂಪಿನ ಜೊತೆ ಮಾತಾಡೋವಾಗ ಈ ರೀತಿ ಹೇಳಿರೋ ಕ್ಲಿಪ್ ವೈರಲ್ ಆಗ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಜೆಪಿ, ಈ ಹೇಳಿಕೆ ಸಮಾಜವಾದಿ ಪಾರ್ಟಿಯ ಹಿಂದೂ ದ್ವೇಷ ಹಾಗೂ ಜಿನ್ನಾ ಪ್ರೀತಿಯನ್ನ ತೋರಿಸುತ್ತೆ ಅಂತ ಹೇಳಿದೆ.

ಈ ನಡುವೆ ತಾನು ಹಿಂದೂ ವಿರೋಧಿಯಲ್ಲ ಅಂತ ಪ್ರೊಜೆಕ್ಟ್ ಮಾಡೋಕೆ SP ಕೂಡ ಟ್ರೈ ಮಾಡ್ತಿದೆ. ಉತ್ತರ ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ಅಯೋಧ್ಯೆಯಲ್ಲಿ ಬಿಜೆಪಿಗಿಂತ ವೇಗವಾಗಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸ್ತೀವಿ ಅಂತ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.

ಇನ್ನು ಅಖಿಲೇಶ್ ಸಿಂಗ್ ಯಾದವ್ ಮತ್ತು ಜಯಂತ್ ಚೌಧರಿ ಜೋಡಿಗೆ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ಕೊಟ್ಟಿದ್ದಾರೆ. ಇದೇ ರೀತಿಯ ಜೋಡಿ, 2014 ಮತ್ತು 2017ರಲ್ಲೂ ಇದೇ ರೀತಿಯ ಹುಡುಗರ ಜೋಡಿ ಬಂದಿತ್ತು. ಒಬ್ರು ದೆಹಲಿಯ ಹುಡುಗ ಅಂದ್ರೆ ರಾಹುಲ್ ಗಾಂಧಿ.., ಮತ್ತೊಬ್ಬರು ಲಕ್ನೋದ ಹುಡುಗ ಅಂದ್ರೆ ಅಖಿಲೇಶ್​​​.. ಆಗ ಜನ ನೀವು ಯೋಗ್ಯರಲ್ಲ ಅಂತ ಹೇಳಿ ಕಳುಹಿಸಿದ್ರು. ಮುಜಾಫರ್ ನಗರ ದಂಗೆಯಾದಾಗ ಲಕ್ನೋದ ಹುಡುಗ ಅಧಿಕಾರದಲ್ಲಿದ್ದುಕೊಂಡು ಹತ್ಯೆ ಮಾಡಿಸ್ತಿದ್ರು. ಅದೇ ದೆಹಲಿ ಹುಡುಗ ದಂಗೆಗೆ ಬೆಂಬಲಿಸ್ತಿದ್ರು ಅಂತ ಹೇಳಿದ್ದಾರೆ.

ಇನ್ನು ಗೃಹಸಚಿವ ಅಮಿತ್ ಶಾ ಮಾತನಾಡಿ, ಮಾಫಿಯಾವನ್ನು ಹುಡುಕಿದ್ರೆ ಅದು ಮೂರು ಸ್ಥಳಗಳಲ್ಲಿ ಸಿಗುತ್ತೆ. ಒಂದು ಜೈಲಿನಲ್ಲಿ, ಉತ್ತರ ಪ್ರದೇಶದಿಂದ ಹೊರಗೆ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂತ ಹೇಳಿದ್ಧಾರೆ.

-ಸಮಾಜವಾದಿ ಪಕ್ಷದ ಮಿತ್ರಪಕ್ಷದ ರಾಷ್ಟ್ರೀಯ ಲೋಕದಳ್​​​ನ ಮುಖ್ಯಸ್ಥ ಜಯಂತ್ ಚೌಧರಿ ಬಿಜೆಪಿ ವಿರುದ್ಧ ಕಿಡಿಕಾರಲು ಹೇಮ ಮಾಲಿನಿ ಹೆಸರು ಬಳಸಿಕೊಂಡು ವಿವಾದಕ್ಕೀಡಾಗಿದ್ದಾರೆ. ನಮ್ಮ ಪಕ್ಷದವರಿಗೆ ಅಮಿತ್ ಶಾ ಕರೆ ಮಾಡಿ, ನಮ್ ಪಕ್ಷಕ್ಕೆ ಬನ್ನಿ.. ನಿಮ್ಮನ್ನು ನನ್ನ ಹೇಮ ಮಾಲಿನಿ ಮಾಡ್ತೀವಿ ಅಂದಿದ್ದಾರಂತೆ.. ಆದ್ರೆ ನನ್ನನ್ನ ಹೇಮ ಮಾಲಿನಿ ಮಾಡೋದು ಬೇಡ.. ಜನರಿಗೆ ಏನ್ ಮಾಡ್ತೀರಿ ಅನ್ನೋದನ್ನ ಹೇಳಿ? ಲಖೀಂಪುರ್​ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬಸ್ಥರಿಗೆ ಏನ್ ಮಾಡಿದ್ದೀವಿ ಅಂತ ಹೇಳಿ ಅಂತ ಹೇಳಿದ್ದಾರೆ.

-ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ಗೆ ಕಪ್ಪ ಬಾವುಟ ತೋರಿಸಿದ್ದ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕ ಛಾತ್ರ ಸಭಾದ ಸದಸ್ಯೆಗೆ SP ಟಿಕೆಟ್ ನೀಡಲಾಗಿದೆ. 25 ವರ್ಷದ ಪೂಜಾ ಶುಕ್ಲಾ ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಿರಿಯ ಅಭ್ಯರ್ಥಿಯಾಗಿದ್ದಾರೆ. 2017ರಲ್ಲಿ ಈಕೆ 10 ಜನರ ಜೊತೆ ಸೇರಿಕೊಂಡು ಆದಿತ್ಯನಾಥ್ ಅವರನ್ನು ಅಡ್ಡಗಟ್ಟಿ, ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿದ್ರು. ಈಗ ಲಕ್ನೋ ಉತ್ತರ ಕ್ಷೇತ್ರದಿಂದ ಇವರಿಗೆ SP ಟಿಕೆಟ್ ನೀಡಿದೆ.

-masthmagaa.com

Contact Us for Advertisement

Leave a Reply