ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯಲು AstraZeneca ಸಜ್ಜು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಕೋವಿಶೀಲ್ಡ್‌ ತಯಾರಿಕಾ ಕಂಪನಿ ಅಸ್ಟ್ರಾಜೆನೆಕಾ ತಾನು ತಯಾರಿಸಿದ ಎಲ್ಲಾ ಕೋವಿಡ್‌-19 ಲಸಿಕೆಯನ್ನ ಹಿಂಪಡೆಯೋಕೆ ಮುಂದಾಗಿದೆ. ಇತ್ತೀಚೆಗೆ ಕೋವಿಶೀಲ್ಡ್‌ ಲಸಿಕೆಯಲ್ಲಿ ಸೈಡ್‌ ಇಫೆಕ್ಟ್ಸ್‌ ಇದೆ ಅಂತ ಸಾಬೀತಾದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿರೋ ಅಸ್ಟ್ರಾಜೆನೆಕಾ, ʻಜಾಗತಿಕವಾಗಿ ಕೋವಿಡ್‌ ಲಸಿಕೆ ತಯಾರಿ ಮತ್ತು ಸಪ್ಲೈ ನಿಲ್ಲಿಸಿದ್ದೇವೆ. ಇದ್ರಲ್ಲಿ ಸೈಡ್‌ ಎಫೆಕ್ಟ್ಸ್‌ ಇದೆ ಅನ್ನೋ ಕಾರಣಕ್ಕೆ ಹಿಂಪಡೆಯಲಾಗ್ತಿಲ್ಲ… ಬದಲಿಗೆ ಕೆಲ ಕಮರ್ಷಿಯಲ್‌ ಕಾರಣಗಳಿಂದ ಈ ಹೆಜ್ಜೆ ಇಡ್ತಾ ಇದೀವಿ. ಇದು ಜಸ್ಟ್‌ ಕೋಇನ್ಸಿಡೆನ್ಸ್‌ ಅಷ್ಟೇʼ ಅಂತೇಳಿದೆ.

-masthmagaa.com

Contact Us for Advertisement

Leave a Reply