ಮಕ್ಕಳ ಮೇಲೆ ಲಸಿಕೆ ಪ್ರಯೋಗ! ಚೀನಾ ಹೊಸ ಲಸಿಕೆ!

masthmagaa.com:

ಅಸ್ಟ್ರಜೆನೆಕಾ ಮತ್ತು ಆಕ್ಸ್​ಫರ್ಡ್​ ವಿವಿ ಅಭಿವೃದ್ಧಿಪಡಿಸಿರುವ ಲಸಿಕೆ ಕುರಿತ ಗೊಂದಲ ಮುಂದುವರಿದಿದೆ. ಈ ನಡುವೆ ಯೂರೋಪಿಯನ್ ರೆಗುಲೇಟರ್ ಕೂಡ ಬ್ಲಡ್ ಕ್ಲಾಟ್ ಆಗಿದ್ದಕ್ಕೆ ಲಸಿಕೆಯೇ ಕಾರಣ ಅನ್ನೋದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ತಿಳಿಸಿದೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮಾತನಾಡಿ, ಆಕ್ಸ್​ಫರ್ಡ್​ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ಬ್ರಿಟನ್​​, ಭಾರತ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಉತ್ಪಾದನೆಯಾಗುತ್ತಿದ್ದು, ವಿಶ್ವದಾದ್ಯಂತ ಬಳಕೆಯಾಗ್ತಿದೆ. ಇದು ಸೇಫಾಗಿದೆ ಅಂತ ಹೇಳಿದ್ದಾರೆ.

ಈ ನಡುವೆ ಚೀನಾ ಮತ್ತೊಂದು ಕೊರೋನಾ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದು ಚೀನಾದ ಗ್ರೀನ್ ಸಿಗ್ನಲ್ ಸಿಕ್ಕ 5ನೇ ಲಸಿಕೆಯಾಗಿದ್ದು, ತುರ್ತು ಬಳಕೆಗೆ ಅನುಮತಿ ಪಡೆದಿರೋ 4ನೇ ಲಸಿಕೆಯಾಗಿದೆ. Anhui Zhifei Longcom Biopharmaceutical Co. Ltd. and the Chinese Academy of Sciences ಅಭಿವೃದ್ಧಿಪಡಿಸಿದ ಲಸಿಕೆ ಇದಾಗಿದ್ದು, ಅಕ್ಟೋಬರ್​ನಲ್ಲೇ ಮೊದಲೆರಡು ಹಂತದ ಪ್ರಯೋಗ ನಡೆಸಿದೆ. ಈಗ ಉಜ್ಬೇಕಿಸ್ತಾನ, ಪಾಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿ 3ನೇ ಹಂತದ ಪ್ರಯೋಗ ನಡೆಸ್ತಾ ಇದೆ. ಈ ನಡುವೆ ಮಾಡೆರ್ನಾ ಸಂಸ್ಥೆ 6 ತಿಂಗಳಿಂದ 6 ವರ್ಷಗಳವರೆಗಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಆರಂಬಿಸಲು ಸಿದ್ಧತೆ ನಡೆಸಿವೆ. 6,750 ಮಕ್ಕಳು ಈ ಪ್ರಯೋಗದಲ್ಲಿ ಭಾಗಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply