ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಜಾರಿಬಿದ್ದರೆ ಕಥೆಯೇನು..? ಏನಾಗುತ್ತೆ..?

ಬಾಹ್ಯಾಕಾಶ ನೋಡೋಕೆ ಅದ್ಭುತವೆನಿಸಿದರೂ ಅಷ್ಟೇ ಡೇಂಜರಸ್. ಇಂಥ ಬಾಹ್ಯಾಕಾಶದಲ್ಲಿದ್ದುಕೊಂಡು ಗಗನಯಾತ್ರಿಗಳು ಸಂಶೋಧನೆ ನಡೆಸುತ್ತಲೆ ಇದ್ದಾರೆ. ಆದರೆ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆದು ಹೋದರೆ ಏನಾಗುತ್ತೆ ಗೊತ್ತಾ..? ದೊಡ್ಡ ನಗರದಲ್ಲಿ ಅಡ್ರೆಸ್ ಮಿಸ್ಸ್ ಆದ್ರೆ ತಲೆ ಕೆಟ್ಟು ಹೋಗುತ್ತೆ. ಹೀಗಿರುವಾಗ ಅಂತ್ಯವೇ ಇಲ್ಲದ ಬಾಹ್ಯಾಕಾಶದಲ್ಲಿ ತೇಲಿ ಹೋದರೆ ಆ ಗಗನಯಾತ್ರಿಯ ಕಥೆ ಏನಾಗಬೇಡ? ಹಾಗಾದ್ರೆ ಬಾಹ್ಯಾಕಾಶದಲ್ಲಿ ಕಳೆದು ಹೋದವರು ಅಲ್ಲೇ ಉಳೀತಾರಾ..? ಅಥವಾ ಆಕಾಶದಿಂದ ಇಳಿದು ಭೂಮಿಗೆ ಬರ್ತಾರಾ..? ಈ ಇಂಟರೆಸ್ಟಿಂಗ್ ಮಾಹಿತಿಯನ್ನ ನಾವು ನಿಮಗೆ ಹೇಳ್ತಾ ಹೋಗ್ತೀವಿ. ಕೊನೆವರೆಗೂ ಓದಿ..

ಗಗನಯಾತ್ರಿಗಳನ್ನ ಗಗನನೌಕೆಗೆ ಕಟ್ಟುತ್ತಾರೆ!
ಗಗನಯಾತ್ರಿಗಳು ಗಗನನೌಕೆ ಅಥವಾ ಸ್ಪೇಸ್ ಸ್ಟೇಷನ್ ನಿಂದ ಆಗಾಗ ಹೊರಗೆ ಬರ್ತಾ ಇರ್ತಾರೆ. ಇಂಥ ಟೈಮಲ್ಲಿ ಗಗನನೌಕೆ ಜೊತೆಗೆ ಸಂಪರ್ಕ ಕಳೆದುಕೊಂಡರೆ ಬಾಹ್ಯಾಕಾಶದಲ್ಲಿ ಕಳೆದುಹೋಗಿಬಿಡ್ತಾರೆ. ಹೀಗಾಗೆ ಅವರನ್ನ ಗಗನನೌಕೆಗೆ ಕಟ್ಟಲಾಗುತ್ತೆ. ಅಂದ್ರೆ 26 ಮೀಟರ್ ಉದ್ದದ ಬ್ರೇಡೆಡ್ ಸ್ಟೀಲ್ ವೈರ್ ನ ಒಂದು ತುದಿಯನ್ನ ಗಗನಯಾತ್ರಿಗೂ.. ಮತ್ತೊಂದು ತುದಿಯನ್ನ ಗಗನನೌಕೆಗೂ ಕಟ್ಟಲಾಗುತ್ತೆ. ಈ ಬ್ರೇಡೆಡ್ ಸ್ಟೀಲ್ ವೈರ್ ಗೆ ಸುಮಾರು 500 ಕೆಜಿ ತೂಕವನ್ನ ತಡೆದುಕೊಳ್ಳುವ ಸಾಮಥ್ರ್ಯ ಇದೆ. ಒಂದು ವೇಳೆ ಈ ಟೆಕ್ನಿಕ್ ವಿಫಲವಾದ್ರೆ ಅಥವಾ ವೈರ್ ಕಟ್ ಆದ್ರೆ ಗಗನಯಾತ್ರಿಗಳಿಗೆ ಮತ್ತೊಂದು ಆಯ್ಕೆ ಇರುತ್ತೆ. ಅದೇ ಸೇಫರ್ಸ್.

ಏನಿದು ಸೇಫರ್ಸ್..?
ಸೇಫರ್ಸ್ ಅಂದ್ರೆ `ಸಿಂಪ್ಲಿಫೈಡ್ ಯೇಡ್ ಫಾರ್ ಈವ ರೆಸ್ಕ್ಯೂ’. ಇದೊಂಥರ ಎಮರ್ಜೆನ್ಸಿ ಜೆಟ್ ಪ್ಯಾಕ್ ಸಿಸ್ಟಮ್ ಥರ. ಇದರ ಸಹಾಯದಿಂದ ಗಗನಯಾತ್ರಿಗಳು ಗಗನನೌಕೆಯಿಂದ ಹೊರಗೆ ಹೋಗಿ ಬರಲು ನೆರವಾಗುತ್ತೇ. ಒಂದು ವೇಳೆ ಸೇಫರ್ಸ್ ಕೂಡ ಕೈಕೊಟ್ಟರೆ ಅಥವಾ ಆಪರೇಟ್ ಮಾಡುವ ಗಗನಯಾತ್ರಿ ಪ್ರಗ್ನೆ ತಪ್ಪಿದ್ರೆ ಕಥೆ ಮುಗೀತು ಅಂತಾನೇ ಅರ್ಥ. ಗಗನನೌಕೆಯಿಂದ ಸಂಪರ್ಕ ಕಳೆದುಕೊಂಡ ಗಗನಯಾತ್ರಿ ಬಾಹ್ಯಾಕಾಶದಲ್ಲಿ ಎಲ್ಲಿ ಹೋಗ್ತಾರೆ ಅಂತ ಹೇಳಕ್ಕಾಗಲ್ಲ. ಇಂತ ಟೈಮಲ್ಲಿ ಗಗನನೌಕೆ ಅಥವಾ ಬಾಹ್ಯಾಕಾಶ ನಿಲ್ದಾಣದ ಒಳಗಿರುವ ಇತರ ಗಗನಯಾತ್ರಿಗಳು ಒಟ್ಟುಗೂಡಿ ರೆಸ್ಕ್ಯೂ ಆಪರೇಷನ್ ಮಾಡಬಹುದು. ಆದರೆ ಇದು ಅಷ್ಟು ಈಸಿ ಇಲ್ಲ. ಯಾಕಂದ್ರೆ ಕಳೆದುಹೋದ ಗಗನಯಾತ್ರಿಯನ್ನ ಹುಡುಕಿ ವಾಪಸ್ ಕರೆತರುವ ಯಾವುದೇ ಗಗನನೌಕೆ ಇದುವರೆಗೆ ರಚನೆಯಾಗಿಲ್ಲ.

ಹಾಗಾದ್ರೆ ಕಳೆದುಹೋದವನ ಕಥೆಯೇನು?
ಇಂಥದ್ದೊಂದು ಅನುಮಾನ ನಿಮ್ಮ ತಲೆಯಲ್ಲಿ ಹುಟ್ಟಿಕೊಳ್ಳಬಹುದು. ಅದನ್ನ ಕ್ಲಿಯರ್ ಮಾಡ್ತೀವಿ ನೋಡಿ. ಒಂದು ವೇಳೆ ಬ್ರೇಡೆಡ್ ಸ್ಟೀಲ್ ವೈರ್ ಕಟ್ ಆಗಿದ್ದರೆ. ವೈರ್ ಕಟ್ ಆದ ತಕ್ಷಣ ಗಗನಯಾತ್ರಿ ಯಾವ ದಿಕ್ಕಿನಲ್ಲಿ ಹೋಗುತ್ತಿರುತ್ತಾನೋ ಅದೇ ದಿಕ್ಕಿನಲ್ಲಿ, ಅಷ್ಟೇ ವೇಗದಲ್ಲಿ ಆತ ಮುಂದುವರಿಯುತ್ತಾನೆ. ಈ ವೇಳೆ ಆತನಿಗೆ ತಾನು ಸ್ವಲ್ಪವೂ ತೂಕವಿಲ್ಲದಂತೆ ಫೀಲ್ ಆಗುತ್ತೆ. ಅಲ್ಲದೆ ತನ್ನ ಕೈಕಾಲುಗಳನ್ನ ಅಲ್ಲಾಡಿಸಲು ಪ್ರಯತ್ನಿಸಿದರೂ ಅಥವಾ ವೇಗವನ್ನ ಹೆಚ್ಚಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿದರೂ ವಿಫಲನಾಗುತ್ತಾನೆ.

ಭೂಮಿಯನ್ನ ಚಂದ್ರನಂತೆ ಸುತ್ತುತ್ತಾನೆ!
ಇದು ಅಚ್ಚರಿಯಾದರೂ ನಿಜ. ಆದರೆ ಹೀಗೆ ಆಗಲು ಬಾಹ್ಯಾಕಾಶದಲ್ಲಿ ಕಳೆದುಹೋಗಿರುವ ಗಗನಯಾತ್ರಿಯ ವೇಗ ಭೂಮಿ ಬಳಿ ಹೋಗುವಷ್ಟು ಇರಬೇಕು. ಆಗ ಮಾತ್ರ ಇದು ಸಾಧ್ಯ. ಗಗನಯಾತ್ರಿ ಭೂಮಿ ಬಳಿ ಬರುತ್ತಿದ್ದಂತೆ ಭೂಮಿಯ ಗುರುತ್ವಾಕರ್ಷಣೆ ಆತನನ್ನ ತನ್ನ ಕಕ್ಷೆಯಲ್ಲಿ ಹಿಡಿದಿಟ್ಟುಕೊಳ್ಳುತ್ತೆ. ಆಗ ಆತ ಭೂಮಿಯ ಸುತ್ತ ಚಂದ್ರ ಸುತ್ತುವಂತೆ ಸುತ್ತುತ್ತಾನೆ. ಆದರೆ ಇದು ಹೆಚ್ಚು ಹೊತ್ತು ಸಾಧ್ಯವಿಲ್ಲ. ಆತನ ಸ್ಪೇಸ್ ಸೂಟ್ ಗೆ ಯಾವುದೇ ಡ್ಯಾಮೇಜ್ ಆಗಿರದಿದ್ದರೆ ಹೆಚ್ಚುಕಮ್ಮಿ 8 ಗಂಟೆ ಕಾಲ ಭೂಮಿ ಸುತ್ತ ಸುತ್ತುತ್ತಿರುತ್ತಾನೆ. ಹೀಗೆ ಆಕ್ಸಿಜನ್ ಮುಗಿಯುವ ತನಕವೂ ಗಿರಿಗಿಟ್ಲೇ ಹೊಡೆಯುತ್ತಿರುತ್ತಾನೆ. ಒಂದು ವೇಳೆ ಆತನ ಸ್ಪೇಸ್ ಸೂಟ್ ಗೆ ಡ್ಯಾಮೇಜ್ ಆಗಿದ್ದರೆ ಆತ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ.

ಹದಿನೈದೇ ಸೆಕೆಂಡ್‍ನಲ್ಲಿ ಪ್ರಜ್ಞೆ ತಪ್ಪುತ್ತಾನೆ!
ಸ್ಪೇಸ್ ಸೂಟ್ ಡ್ಯಾಮೇಜ್ ಆದ ಹದಿನೈದೇ ಸೆಕೆಂಡ್‍ಗಳಲ್ಲಿ ಆತ ಪ್ರಜ್ಞೆ ತಪ್ಪುತ್ತಾನೆ. ಅಲ್ಲದೆ ಏರ್ ಪ್ರೆಷರ್ ಇಲ್ಲದ ಕಾರಣ ಆತನ ರಕ್ತ ಕುದಿಯಲು ಪ್ರಾರಂಭಿಸುತ್ತೆ. ಕೆಲ ಹೊತ್ತಲ್ಲೇ ಆತನ ದೇಹ ಸಹಜ ಆಕಾರದಿಂದ ಎರಡು ಪಟ್ಟು ಊದಿಕೊಳ್ಳುತ್ತದೆ. ಇಲ್ಲಿ ಇನ್ನೊಂದು ಸಾಧ್ಯತೆ ಕೂಡ ಇದೆ. ಒಂದು ವೇಳೆ ಆತ ಸರಿಯಾದ ದಿಕ್ಕು ಹಾಗೂ ಸರಿಯಾದ ವೇಗದಲ್ಲಿ ಸಾಗುತ್ತಿದ್ದರೆ ಭೂಮಿಗೆ ಡ್ಯಾಶ್ ಹೊಡೆಯಬಹುದು. ಆದರೆ ನೆಲವನ್ನ ತಲುಪಲು ಸಾಧ್ಯವೇ ಇಲ್ಲ. ಯಾಕಂದ್ರೆ ಆತನ ವೇಗ ಭೂಮಿಯ ವಾತಾವರಣವನ್ನ ಸೀಳಿಕೊಂಡು ಮುನ್ನುಗ್ಗುವಷ್ಟು ಸ್ಪೀಡಾಗಿ ಇರೋದಿಲ್ಲ. ಒಂದುವೇಳೆ ಅಷ್ಟು ಸ್ಪೀಡ್ ಇದ್ದರೂ ಕೂಡ ಭೂಮಿಯ ವಾತಾವರಣ ಹಾಗೂ ಆತನ ನಡುವೆ ಘರ್ಷಣೆ ಸಂಭವಿಸಿ ಆತ ಸಂಪೂರ್ಣವಾಗಿ ಸುಟ್ಟುಹೋಗುವ ಸಾಧ್ಯತೆ ಇರುತ್ತೆ. ಹೀಗಾಗೆ ಉಲ್ಕೆ, ಧೂಮಕೇತುಗಳು ಆಕಾಶದಿಂದ ಕೆಳಗೆ ಬೀಳುವಾಗ ಬೆಂಕಿಯುಂಡೆಗಳಂತೆ ಕಾಣುತ್ತವೆ. 1968ರಲ್ಲಿ ಇಂಥದ್ದೇ ಒಂದು ದುರ್ಘಟನೆ ನಡೆದಿತ್ತು. ರಷ್ಯಾದ ಗಗನನೌಕೆಯು ಧಗಧಗಿಸುತ್ತಾ ನೆಲಕ್ಕೆ ಅಪ್ಪಳಿಸಿತ್ತು.

ಇದಿಷ್ಟು ಗಗನಯಾತ್ರಿ ಒಬ್ಬ ಬಾಹ್ಯಾಕಾಶದಲ್ಲಿ ಕಳೆದುಹೋದರೆ ಏನೇನ್ ಆಗುತ್ತೆ ಎಂಬುದರ ಬಗ್ಗೆ ಮಾಹಿತಿ. ಆದರೆ ಇದುವರೆಗೂ ಬಾಹ್ಯಾಕಾಶದಲ್ಲಿ ಯಾರು ಕೂಡ ಕಳೆದುಹೋಗಿಲ್ಲ. ಯಾಕಂದ್ರೆ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳಿಸುವ ನಾಸಾ ಹಾಗೂ ಇಸ್ರೋನಂತಹ ಸಂಸ್ಥೆಗಳು ಸೂಕ್ತ ಕ್ರಮಗಳನ್ನ ಕೈ ಗೊಂಡಿರುತ್ತವೆ.

Contact Us for Advertisement

Leave a Reply