ಬಾಹ್ಯಾಕಾಶದಲ್ಲಿ ಚೀನೀಯರು ಏನು ಕುಡಿತಿದ್ದಾರೆ ಗೊತ್ತಾ?

masthmagaa.com:

ಚೀನಾ ತನ್ನದೇ ಒಂದು ಬಾಹ್ಯಾಕಾಶ ನಿಲ್ದಾಣ ರೆಡಿ ಮಾಡ್ತಾ ಇದೆ. ಅದಕ್ಕಾಗಿ ಏಪ್ರಿಲ್​​ನಲ್ಲಿ ಸ್ಟೇಷನ್​​ನ ಕೋರ್​​ನ್ನು ಕಳುಹಿಸಿದ್ದು, ಕಳೆದ ತಿಂಗಳು ಮೂವರು ಗಗನಯಾತ್ರಿಗಳನ್ನು ಕೂಡ ಕಳುಹಿಸಿದೆ. ಆದ್ರೆ ಸ್ಪೇಸ್ ಸ್ಟೇಷನ್ ನಿರ್ಮಾಣ ಕಾರ್ಯ ನಡೆಸ್ತಿರೋ ಈ ಗಗನಯಾತ್ರಿಗಳು ತಮ್ಮ ಯೂರಿನನ್ನೇ ಶುದ್ಧೀಕರಿಸಿ ಕುಡೀತಿದ್ದಾರೆ. ಯೆಸ್​.. ಸ್ಪೇಸ್​ ಸ್ಟೇಷನ್​​ನಲ್ಲಿ ಕುಡಿಯೋ ನೀರಿಗೆ ಯಾವುದೇ ತೊಂದ್ರೆಯಾಗಬಾರದು ಅಂತ ಚೀನಾ ಈ ವ್ಯವಸ್ಥೆ ಮಾಡಿದೆ. ಅದೇ ಯೂರಿನ್ ಟ್ರೀಟ್ಮೆಂಟ್ ಸಿಸ್ಟಂ..ಇದು ಗಗನಯಾತ್ರಿಗಳ ಯೂರಿನ್ನನ್ನೇ ಕ್ಲೀನ್ ಮಾಡಿ ಅವರಿಗೆ ಅವರಿಗೆ ನೀಡುತ್ತೆ. ಕಳೆದೊಂದು ವಾರದಲ್ಲಿ 6 ಲೀಟರ್​​​ನಷ್ಟು ಯೂರಿನ್​ ಸಂಸ್ಕರಣೆ ಮಾಡಿ, 5 ಲೀಟರ್​ ಶುದ್ಧ ಕುಡಿಯೋ ನೀರು ಕೊಟ್ಟಿದೆ ಈ ಯೂರಿನ್ ಟ್ರೀಟ್ಮೆಂಟ್ ಸಿಸ್ಟಂ. ಈವರೆಗೆ 66 ಲೀಟರ್ ಯೂರಿನ್ನನ್ನು ಕ್ಲೀನ್ ಮಾಡಿ, ಶುದ್ಧ ನೀರು ನೀಡಿದೆ ಈ ವ್ಯವಸ್ಥೆ. ಅಂದಹಾಗೆ ಈ ತಂತ್ರಜ್ಞಾನವನ್ನು ಚೀನಾನೇ ಮೊದಲು ಬಳಸಿದ್ದು ಅಂತೇನಿಲ್ಲ. ಈ ಹಿಂದೆ 2009ರಲ್ಲಿ ಮೊಟ್ಟ ಮೊದಲ ಬಾರಿಗೆ ಅಮೆರಿಕದ ಮೈಕಲ್ ಬೈರಾಟ್, ಜಪಾನ್​ನ ಕೋಯಿಚೀ ವಾಕಾಟಾ ಮತ್ತು ಸ್ಟೇಷನ್ ಕಮಾಂಡರ್ ಗೆನ್ನೆಡಿ ಪಾಡಲ್ಕಾ ಬಾಹ್ಯಾಕಾಶದಲ್ಲಿ ಮೊಟ್ಟ ಮೊದಲ ಬಾರಿಗೆ ಯೂರಿನ್ ಸಂಸ್ಕರಣೆ ಮಾಡಿ ನೀರು ಕುಡಿದಿದ್ರು. ಈ ಘಟನೆಯನ್ನು ನೋಡಲು ನಾಸಾದ ಜಾನ್ಸನ್​​ಸ್ಪೇಸ್​ ಸೆಂಟರ್ ಮತ್ತು ಹಂಟ್ರಸ್​​ವಿಲ್ಲೆಯ ಮಾರ್ಷಲ್ ಸ್ಪೇಸ್​ ಸೆಂಟರ್​​ನಲ್ಲಿ ಸಾವಿರಾರು ಜನ ಸೇರಿದ್ರು. ಅಮೆರಿಕದ ಈ ವಾಟರ್ ರೀಸೈಕ್ಲಿಂಗ್ ಸಿಸ್ಟಂ ಬೆಲೆ 25 ಕೋಟಿ ಡಾಲರ್​​​.. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 1,850 ಕೋಟಿ ರೂಪಾಯಿಯಾಗುತ್ತೆ.

-masthmagaa.com

Contact Us for Advertisement

Leave a Reply