ʻನಾನು ಅಧ್ಯಕ್ಷನಾದ್ರೆ ಮುಸ್ಲಿಮರಿಗೆ ಬಾಗಿಲು ಬಂದ್‌ ಮಾಡ್ತೇನೆʼ! ಯಹೂದಿ ಸಮಾವೇಶದಲ್ಲಿ ಟ್ರಂಪ್‌ ವಿವಾದದ ಕಿಡಿ!

masthmagaa.com:

ʻʻನಾವು ಮಾಡಿದ್ದ ಟ್ರಾವೆಲ್‌ ಬ್ಯಾನ್‌ ನೆನಪಿದ್ಯಾ?ನಾನು ಅಧಿಕಾರಕ್ಕೆ ಬಂದ್ರೆ ಮತ್ತೊಮ್ಮೆ ಮೊದಲ ದಿನದಿಂದ್ಲೆ ಅದನ್ನ ಪುನಃ ಜಾರಿಗೆ ತರ್ತೇನೆ” ಅಂತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ವಾಷಿಂಗ್‌ಟನ್‌ನಲ್ಲಿ ನಡೆದ ರಿಪಬ್ಲಿಕನ್‌ ಯಹೂದಿಗಳ ಸಮಾವೇಶದಲ್ಲಿ ಮಾತನಾಡಿರೊ ಟ್ರಂಪ್‌ ಮುಸ್ಲೀಮರ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಟ್ರಂಪ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇರಾನ್‌, ಲಿಬಿಯಾ, ಸೊಮಾಲಿಯ, ಸಿರಿಯಾ, ಯೆಮನ್‌, ಇರಾಕ್‌ ಮತ್ತು ಸುಡಾನ್‌ ಪ್ರಜೆಗಳಿಗೆ ಅಮೆರಿಕಗೆ ಬಾರದಂತೆ ನಿಷೇಧ ಹೇರಲಾಗಿತ್ತು. ಈ ಕುರಿತು ನಿನ್ನೆ ಮಾತನಾಡುವಾಗ ಟ್ರಂಪ್‌ “ಇಸ್ಲಾಮಿಕ್‌ ಟೆರರಿಸ್ಟ್‌ಗಳನ್ನ ನಾವು ದೇಶದಿಂದ ಹೊರಗಿಡ್ತೇವೆ. ಇಸ್ರೇಲ್‌ನಂತಹ ನಮ್ಮ ಮಿತ್ರ ರಾಷ್ಟ್ರಗಳನ್ನ ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ರಕ್ಷಣೆ ಮಾಡಿಕೊಳ್ತೇವೆ.” ಅಂದಿದ್ದಾರೆ. ಮೊನ್ನೆಯಷ್ಟೇ ಹೆಜ್ಬೊಲ್ಲಾ ಉಗ್ರರನ್ನು ʻವೆರಿ ಸ್ಮಾರ್ಟ್‌ʼ ಅಂತ ಕರೆದಿದ್ದ ಟ್ರಂಪ್‌, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನ್ಯಾತನಾಹು ಹೆಜ್ಬೊಲ್ಲ ವಿರುದ್ಧ ಕ್ರಮ ತಗೊಳ್ಳುವಲ್ಲಿ ವಿಳಂಬ ಮಾಡ್ತಿದ್ದಾರೆ ಅಂದಿದ್ರು. ಈ ಬೆನ್ನಲ್ಲೆ ಇಂತಹ ಹೇಳಿಕೆ ನೀಡಿ ಸದ್ದು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply