ಅಮೆರಿಕದ ಝೂನಲ್ಲಿ 13 ಗೋರಿಲ್ಲಾಗಳಿಗೆ ಕೊರೋನಾ!

masthmagaa.com:

ಅಮೆರಿಕದ ಜಾರ್ಜಿಯಾದ ಅಟ್ಲಾಂಟ ಝೂನಲ್ಲಿ ಕನಿಷ್ಠ 13 ಗೋರಿಲ್ಲಾಗಳಿಗೆ ಕೊರೋನ ಸೋಂಕು ತಗುಲಿದೆ. ಮೃಗಾಲಯದಲ್ಲಿ ಕೆಲವು ಗೊರಿಲ್ಲಾಗಳಲ್ಲಿ ಕೆಮ್ಮು, ನೆಗಡಿ ಮತ್ತು ಹಸಿವಿಲ್ಲದೆ ಇರೋದು ಕಂಡು ಬಂದಿದ್ದು, ಕೂಡಲೆ ಗೊರಿಲ್ಲಾಗಳ ಮಲ, ಮೂಗು- ಗಂಟಲಿನ ದ್ರವದ ಮಾದರಿಯನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದ್ರಲ್ಲಿ 13 ಗೋರಿಲ್ಲಾಗಳಿಗೆ ಸೋಂಕು ಪತ್ತೆಯಾಗಿದೆ. ಝೂ ಸಿಬ್ಬಂದಿ ಪೈಕಿ ಯಾರಿಂದಾದ್ರೂ ಕೊರೋನಾ ಹರಡಿರಬಹುದು ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply