ಯೆಮನ್​​ನಲ್ಲಿ 3ನೇ ದಿನವೂ 100ಕ್ಕೂ ಹೆಚ್ಚು ಹೌತಿಗಳ ಮಾರಣಹೋಮ!

masthmagaa.com:

ಯೆಮನ್​​ನಲ್ಲಿ ಸೌದಿ ನೇತೃತ್ವದ ಸೇನಾ ಒಕ್ಕೂಟ ಮತ್ತು ಹೌತಿ ಬಂಡುಕೋರರ ನಡುವಿನ ಕಾಳಗ ಮುಂದುವರಿದಿದೆ. ಮಾರಿಬ್ ಪ್ರಾಂತ್ಯದಲ್ಲಿ ಪ್ರತಿದಿನ ನೂರಾರು ಹೌತಿ ಬಂಡುಕೋರರನ್ನು ಹೊಡೆದುರುಳಿಸಲಾಗುತ್ತಿದೆ. ಇವತ್ತು ಕೂಡ ಸೌದಿ ಏರ್​ಸ್ಟ್ರೈಕ್​​​ನಲ್ಲಿ 108 ಮಂದಿ ಹೌತಿ ಬಂಡುಕೋರರು ಪ್ರಾಣ ಕಳ್ಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರೋ ಸೌದಿ ನೇತೃತ್ವದ ಒಕ್ಕೂಟ, ಕಳೆದ 24 ಗಂಟೆಗಳಲ್ಲಿ ಅಬ್ದಿಯಾದಲ್ಲಿ 19 ಕಾರ್ಯಾಚರಣೆಗಳನ್ನು ನಡೆಸಿದ್ದೀವಿ. 12 ಮಿಲಿಟರಿ ವಾಹನಗಳನ್ನು ಧ್ವಂಸಗೊಳಿಸಿದ್ದೀವಿ ಅಂತ ಹೇಳಿದೆ. ಸೋಮವಾರ 156 ಮತ್ತು ಮಂಗಳವಾರ 134 ಮಂದಿ ಬಂಡುಕೋರರು ಪ್ರಾಣ ಬಿಟ್ಟಿದ್ರು.

-masthmagaa.com

Contact Us for Advertisement

Leave a Reply