ಅಮೆರಿಕದಲ್ಲಿ ಸುಂಟರಗಾಳಿಗೆ 50 ಮಂದಿ ಸಾವು!

masthmagaa.com:
ಅಮೆರಿಕದ ಕೆಂಟುಕಿ ಮತ್ತು ಇತರ ಕೆಲವೊಂದು ರಾಜ್ಯಗಳಿಗೆ ಸುಂಟರಗಾಳಿ ಅಪ್ಪಳಿಸಿದ್ದು, ಕನಿಷ್ಠ 50 ಜನ ಮೃತಪಟ್ಟಿದ್ದಾರೆ. ಸುಂಟರಗಾಳಿ ಆರ್ಭಟಕ್ಕೆ ಹಲವು ಕಟ್ಟಡಗಳು ಧ್ವಂಸವಾಗಿದ್ದು, ಸಾವಿನ ಸಂಖ್ಯೆ 100 ರೀಚ್ ಆಗೋ ಸಾಧ್ಯತೆ ಇದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ಕಾಲಮಾನ ಶುಕ್ರವಾರ ರಾತ್ರಿ ಕನಿಷ್ಠ ನಾಲ್ಕು ಸುಂಟರಗಾಳಿ ಕೆಂಟುಕಿಗೆ ಅಪ್ಪಳಿಸಿವೆ. ಮೊದಲ ಸುಂಟರಗಾಳಿ ಅಂತೂ ರಾಜ್ಯದ ಸುಮಾರು 365 ಕಿಲೋ ಮೀಟರ್​ ಸಂಚರಿಸಿದೆ ಅಂತ ಕೆಂಟುಕಿ ಗವರ್ನರ್​ ಆ್ಯಂಡಿ ಬೆಷೀರ್​ ಹೇಳಿದ್ದಾರೆ. ಕೆಂಟುಕಿ ಇತಿಹಾಸದಲ್ಲಿ ಶುಕ್ರವಾರದ ರಾತ್ರಿ ಟಫೆಸ್ಟ್ ಆಗಿತ್ತು ಅಂತಾನೂ ಅವರು ಹೇಳಿದ್ದಾರೆ.
-masthmagaa.com

Contact Us for Advertisement

Leave a Reply