ವಿ‍ಶ್ವಸಂಸ್ಥೆಯಲ್ಲಿ ಉತ್ತರ ಕೊರಿಯಾ ಮೇಲೆ ದೊಡ್ಡ ನಿರ್ಬಂಧಕ್ಕೆ ಮುಂದಾದ ಅಮೆರಿಕ! ಆದ್ರೆ…?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಏಷ್ಯಾ ಬಿಟ್ಟು ಹೋಗ್ತಿದ್ದಂತೆ ಮಿಸೈಲ್‌ ಟೆಸ್ಟ್‌ ನಡೆಸಿದ್ದ ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆಯಲ್ಲಿ ಮತ್ತಷ್ಟು ನಿರ್ಬಂಧ ಹೇರೋಕೆ ಅಮೆರಿಕ ಮುಂದಾಗಿತ್ತು. ಇದಕ್ಕಾಗಿ ಭದ್ರತಾ ಮಂಡಳಿಯಲ್ಲಿ ಉತ್ತರ ಕೊರಿಯಾಗೆ ತೈಲ ಹಾಗೂ ತಂಬಾಕು ರಫ್ತಿನ ಮೇಲೆ ನಿಷೇಧ ಹೇರ್ಬೇಕು ಅಂತ ಆಗ್ರಹಿಸಿ ಮತದಾನ ಕೂಡ ನಡೆಸಿತ್ತು. ಆದರೆ ಇದಕ್ಕೆ ಚೀನಾ ಹಾಗೂ ರಷ್ಯಾ ಇಬ್ಬರೂ ವಿರೋಧ ವ್ಯಕ್ತಪಡಿಸಿದ್ದು ನಿರ್ಣಯದ ವಿರುದ್ದ ಮತಹಾಕಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವಸಂಸ್ಥೆಯಲ್ಲಿನ ಚೀನಾ ಪ್ರತಿನಿಧಿ ಜಾಂಗ್‌ ಜುನ್‌, ಸದ್ಯ ಉತ್ತರ ಕೊರಿಯಾದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದೆ. ಅವರ ಮೇಲೆ ಮಗದಷ್ಟು ಸಾಂಕ್ಷನ್‌ ಹೇರೋ ಬಗ್ಗೆ ನಾವು ಯೋಚನೆ ಮಾಡೋದಿಲ್ಲ. ಅಮೆರಿಕ ಒಂದೇ ಉತ್ತರ ಕೊರಿಯಾ ಜೊತೆಗೆ ನೇರವಾಗಿ ಮಾತುಕತೆ ನಡೆಸಬೇಕು ಅಂತ ಹೇಳಿದ್ದಾರೆ. ಅಂದ್ರೆ ಇದು ವಿಶ್ವಸಂಸ್ಥೆಗೆ ಸಂಬಂಧ ಪಟ್ಟ ವಿಚಾರವಲ್ಲ ಕೇವಲ ಅಮೆರಿಕ ನಾರ್ಥ್‌ ಕೊರಿಯಾಗೆ ಸಂಬಂಧಿಸಿದ ವಿಚಾರ ಅನ್ನೋ ರೀತಿ. ಇನ್ನು ರಷ್ಯಾ ಪ್ರತಿಕ್ರಿಯಿಸಿ ವಿಶ್ವಸಂಸ್ಥೆಯು ಈ ಕ್ರಮಗಳನ್ನ ಅವರ ಮೇಲೆ ಹೇರಿದ್ರೆ, ಮುಂದೆ ಅವರ ಜೊತೆಗೆ ಮಾತುಕತೆ ನಡಸೋಕೆ ಯಾವುದೇ ದಾರಿ ಇರಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply