ಕಾಬೂಲ್​​ಗೆ ಭೇಟಿ ನೀಡಿದ ಕತಾರ್ ವಿದೇಶಾಂಗ ಸಚಿವ!

masthmagaa.com:

ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅಫ್ಘಾನಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅಫ್ಘಾನಿಸ್ತಾನದ ಹೊಸ ಪ್ರಧಾನಿ ಮುಲ್ಲಾ ಮೊಹ್ಮದ್ ಹಸನ್ ಅಖುಂಡ್​ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಭಯನಾಯಕರು ಅಫ್ಘಾನಿಸ್ತಾನದ ಸ್ಥಿರತೆಗೆ ಧಕ್ಕೆ ತರುವ ಭಯೋತ್ಪಾದಕ ಸಂಘಟನೆಗಳನ್ನು ಎದುರಿಸೋದು ಮತ್ತು ದೇಶದಲ್ಲಿ ಶಾಂತಿ ಸ್ಥಾಪನೆ ಸಂಬಂಧ ಚರ್ಚಿಸಿದ್ರು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply