ಮಹಿಳೆ ಮೇಲೆ ನೂರಾರು ಇಲಿಗಳ ಅಟ್ಯಾಕ್‌ ! ಎಲ್ಲಿ ಗೊತ್ತಾ?

masthmagaa.com:

ರಸ್ತೆಯಲ್ಲಿ ಹೋಗುವಾಗ ಒಂದು ಇಲಿ ಬಂದ್ರೆ ಏನೂ ಅನ್ಸಲ್ಲ.. ಎರಡ್ಮೂರು ಇಲಿಗಳು ಬಂದ್ರೂ ಧೈರ್ಯವಾಗಿ ಹೋಗ್ಬೋದು. ಅದೇ ನೂರಾರು ಇಲಿಗಳು ಒಂದೇ ಸಲ ಓಡೋಡಿ ಬಂದ್ರೆ ಏನಾಗ್ಬೇಡ.. ಅಂಥದ್ದೇ ಘಟನೆಯೊಂದು ಇಂಗ್ಲೆಂಡ್​​ನ ಲಂಡನ್​​ನಲ್ಲಿ ನಡೆದಿದೆ. ಇಲ್ಲಿನ ಬ್ಲೊಂಡಿನ್ ಪಾರ್ಕ್​ನಲ್ಲಿ 43 ವರ್ಷದ ಮಹಿಳೆ ಸುಸಾನ್ ಟ್ರೆಫ್​​ಟಬ್​​​​ ರಾತ್ರಿ 9 ಗಂಟೆ ವೇಳೆಗೆ ವಿಹರಿಸಲು ತೆರಳಿದ್ರು. ಈ ವೇಳೆ ನೂರಾರು ಇಲಿಗಳ ಗ್ಯಾಂಗ್ ಒಂದು ಓಡಿ ಬಂದು ಅವರನ್ನು ಅಟ್ಯಾಕ್ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸೂಸಾನ್​​, ನಾನು ಇಷ್ಟು ದೊಡ್ಡ ಇಲಿಗಳ ಗುಂಪನ್ನು ಯಾವತ್ತೂ ನೋಡಿರಲಿಲ್ಲ. ಏನಾಗ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಇಲಿಗಳು ಬಂದು ನನ್ನ ಕಾಲುಗಳನ್ನು ಕಚ್ಚೋಕೆ ಶುರು ಮಾಡಿದ್ವು. ಕೆಲವೊಂದು ಇಲಿಗಳು ಕಾಲಿನ ಮೂಲಕ ನನ್ನ ಮೇಲೆ ಹತ್ತೋಕೆ ಶುರು ಮಾಡಿದ್ವು. ಕತ್ತಲೆ ಇದ್ದಿದ್ರಿಂದ ಇಲಿಗಳು ಬರ್ತಿರೋದು ಎಲ್ಲಿಂದ ಅಂತ ಕೂಡ ಗೊತ್ತಾಗಲಿಲ್ಲ ಅಂತ ಹೇಳಿದ್ದಾರೆ. ಸದ್ಯ ಗಾಯಗೊಂಡಿರೋ ಸೂಸಾನ್​ಗೆ ಚಿಕಿತ್ಸೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply