ಬೋಲ್ಸೊನಾರೋಗೆ ಮಂಗಳಾರತಿ ಮಾಡಿದ ಸುಪ್ರೀಂಕೋರ್ಟ್​!

masthmagaa.com:

ಹೈಕೋರ್ಟ್​ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸೊನಾರೋಗೆ ಸುಪ್ರೀಂಕೋರ್ಟ್​ ಮಹಾಮಂಗಳಾರತಿ ಮಾಡಿದೆ. ಕಾನೂನು ಉಲ್ಲಂಘಿಸಿದ್ರೆ ಸರಿ ಇರಲ್ಲ. ಇದು ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆ ಅಂತ ಹೇಳಿದೆ. ಇತ್ತೀಚೆಗಷ್ಟೇ ಹೈಕೋರ್ಟ್​ ಬೋಲ್ಸೊನಾರೋ ಸರ್ಕಾರದಿಂದ ಹಬ್ಬಿಸಲಾಗುತ್ತಿರೋ ಸುಳ್ಳು ಸುದ್ದಿಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು. ಆದ್ರೆ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯ ರ್ಯಾಲಿಯಲ್ಲಿ ಮಾತನಾಡಿದ ಅವರು, ತನಿಖೆಗೆ ಆದೇಶ ನೀಡಿದ ಜಡ್ಜ್​​ ವಿರುದ್ಧವೇ ಬಾಯಿಗೆ ಬಂದಂಗೆ ಮಾತಾಡಿದ್ರು. ಅಂದಹಾಗೆ ಇದೇ ಜಡ್ಜ್​ ಬೋಲ್ಸೊನಾರೋ ಅವರ ಕೆಲ ಬೆಂಬಲಿಗರನ್ನು ಕೂಡ ಜೈಲಿಗೆ ಕಳುಹಿಸಿದ್ರು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಮುಖ್ಯನ್ಯಾಯಮೂರ್ತಿ ಲುಯಿಜ್ ಫುಕ್ಸ್​​, ಸುಪ್ರೀಂಕೋರ್ಟ್​ ಯಾವುದೇ ಅಥಾರಿಟಿ ಮತ್ತು ಅದರ ಡಿಸಿಷನ್​​ಗಳಿಗಾಗಿ ಬೆದರಿಕೆ ಹಾಕೋದನ್ನು ಸುಪ್ರೀಂಕೋರ್ಟ್​​ ಸಹಿಸಿಕೊಳ್ಳೋದಿಲ್ಲ. ಯಾರೂ ಕೋರ್ಟ್​​ಗಳನ್ನು ಬಂದ್ ಮಾಡೋಕೆ ಸಾಧ್ಯವಿಲ್ಲ. ನಮ್ಮ ಸ್ವಾತಂತ್ರ್ಯಕ್ಕೆ ಬೆದರಿಕೆಯೊಡ್ಡಿದ್ರೆ ಅದನ್ನೂ ನಾವು ಸಹಿಸಿಕೊಳ್ಳಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply