ಸದ್ಯದಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ..?

masthmagaa.com:

ಐಎಸ್​ಐ ಮುಖ್ಯಸ್ಥರ ಬದಲಾವಣೆ ವಿಚಾರವಾಗಿ ಸೇನೆಯೊಂದಿಗೆ ಕಿರಿಕ್ ಮಾಡ್ಕೊಂಡ ಪ್ರಧಾನಿ ಇಮ್ರಾನ್ ಖಾನ್​​ಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸೇನೆ ಕಳೆದ ತಿಂಗಳು ಜನರಲ್ ನದೀಂ ಅಂಜುಂರನ್ನು ಐಎಸ್​ಐ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಆದ್ರೆ ಇಮ್ರಾನ್ ಖಾನ್ ಫೈಜ್ ಹಮೀದೇ ಈ ಹುದ್ದೆಯಲ್ಲಿ ಮುಂದುವರಿಯಬೇಕು ಅಂತ ಒತ್ತಾಯಿಸಿದ್ರು. ಆದ್ರೂ ಕೂಡ ಅಂತಿಮವಾಗಿ ಸೇನೆ ಫೈಜ್ ಹಮೀದ್​​​ರನ್ನು ಬದಲಿಸಿದ್ದು, ಇದೇ ನವೆಂಬರ್ 20ರಿಂದ ಫೈಜ್ ಹಮೀದ್​ ಅಧಿಕಾರ ಸ್ವೀಕರಿಸಲಿದ್ದಾರೆ. ಆದ್ರೀಗ ಈ ಕಿರಿಕ್ ಇಮ್ರಾನ್ ಖಾನ್ ಕುರ್ಚಿಗೇ ಕಂಟಕವಾಗಲಿದೆ ಅಂತ ಮಾಧ್ಯಮಗಳು ವರದಿ ಮಾಡ್ತಿವೆ. ಯಾಕಂದ್ರೆ ಸದ್ಯ ಭ್ರಷ್ಟಾಚಾರ ಕೇಸ್​ನಲ್ಲಿ ಶಿಕ್ಷೆಗೆ ಗುರಿಯಾಗಿ, ಲಂಡನ್​​ನಲ್ಲಿ ಚಿಕಿತ್ಸೆ ಪಡೀತಿರೋ ನವಾಜ್ ಷರೀಪ್​​ರನ್ನು ಪಾಕಿಸ್ತಾನಕ್ಕೆ ಬರುವಂತೆ ಸೂಚಿಸಲಾಗಿದೆ. ಯಾಕಂದ್ರೆ ಮೂಲಗಳ ಪ್ರಕಾರ ಈಗಾಗಲೇ ಇಮ್ರಾನ್ ಖಾನ್ ಮುಂದೆ 2 ಆಯ್ಕೆಗಳನ್ನು ಇಡಲಾಗಿದೆ. ಒಂದೋ ನವೆಂಬರ್ 20ರ ಒಳಗಾಗಿ ಅವರೇ ರಾಜೀನಾಮೆ ನೀಡೋದು.. ಎರಡನೆಯದು ಸಂಸತ್​ನಲ್ಲಿ ವಿಪಕ್ಷಗಳೇ ಆಂತರಿಕ ಬದಲಾವಣೆ ತರೋದು.. ಎರಡರಲ್ಲಿ ಯಾವುದು ನಡೆದ್ರೂ ಇಮ್ರಾನ್ ಖಾನ್ ಕೆಳಗಿಳಿಯಲಿದ್ದಾರೆ. ಜೊತೆಗೆ ಇಮ್ರಾನ್ ಖಾನ್ ಪಕ್ಷ ತೆಹ್ರೀಕ್ ಇ ಇನ್ಸಾಫ್​ ಸದ್ಯದಲ್ಲೇ ಮಿತ್ರಪಕ್ಷಗಳಾದ ಮುತ್ತಹಿದಾ ಕೌಮಿ ಮೂವ್​ಮೆಂಟ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್​​ನ ಬೆಂಬಲ ಕಳೆದುಕೊಳ್ತಾರೆ ಅಂತ ಕೂಡ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ನವಾಜ್ ಷರೀಫ್ ಬಂದ್ರೂನೂ ಅವರನ್ನು ಪ್ರಧಾನಿ ಮಾಡಲ್ಲ. ಬದಲಿಗೆ ಅವರ ಸಹೋದರ ಶಹಬಾಜ್ ಷರೀಫ್​​ರನ್ನು ಪ್ರಧಾನಿಯನ್ನಾಗಿ ಮಾಡಲಾಗುತ್ತೆ ಅಂತ ಕೂಡ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply