ಮಯನ್ಮಾರ್​ನಲ್ಲಿ ಪ್ರತಿಭಟನಾನಿರತರ ಮೇಲೆ ಕಾರು ನುಗ್ಗಿಸಿದ ಸೇನೆ!

masthmagaa.com:
ಮಯನ್ಮಾರ್​​ನಲ್ಲಿ ಮಿಲಿಟರಿ ಸರ್ಕಾರದ ವಿರುದ್ಧದ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ಅದಕ್ಕೆ ಹೊಸ ಉದಾಹರಣೆ ನಿನ್ನೆ ನಡೆದ ಘಟನೆ.. ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಸೇನೆ ಕಾರು ನುಗ್ಗಿಸಿದೆ. ಇದ್ರಲ್ಲಿ ಐವರು ಪ್ರತಿಭಟನಾಕಾರರು ಪ್ರಾಣ ಬಿಟ್ಟಿದ್ದು, 15 ಜನರನ್ನು ಅರೆಸ್ಟ್ ಮಾಡಲಾಗಿದೆ. ಫೆಬ್ರವರಿ 1ರಂದು ನಡೆದ ಮಿಲಿಟರಿ ಕ್ಷಿಪಕ್ರಾಂತಿಯ ಬಳಿಕ ನಿರಂತರ ಪ್ರತಿಭಟನೆ ನಡೆಯುತ್ತಲೇ ಇದ್ದು, ಈವರೆಗೆ 1300ಕ್ಕೂ ಹೆಚ್ಚು ಜನ ಪ್ರಾಣ ಕಳ್ಕೊಂಡಿದ್ದಾರೆ.

ಮತ್ತೊಂದ್ಕಡೆ ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸನ್ ಸು ಕ್ಯೀ ಅವರ ವಿಚಾರಣೆ ನಡೆಸಿದ ಕೋರ್ಟ್​ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಿಲಿಟರಿ ಕ್ಷಿಪ್ರಕ್ರಾಂತಿ ಬಳಿಕ ಇವರನ್ನು ಅರೆಸ್ಟ್ ಮಾಡಿದ್ದ ಸೇನಾ ಸರ್ಕಾರ, ವಿವಿಧ ರೀತಿಯ ಕೇಸ್​​ಗಳನ್ನು ಹೇರಿತ್ತು.
-masthmagaa.com

Contact Us for Advertisement

Leave a Reply