ಚೀನಾಗೆ ಗುನ್ನ ಹೊಡೆದ ಆಸ್ಟ್ರೇಲಿಯಾ!

masthmagaa.com:

ವಿಶ್ವದ ಹಲವು ದೇಶಗಳೊಂದಿಗೆ ನಿರಂತರವಾಗಿ ಕಿರಿಕ್ ಮಾಡಿಕೊಳ್ಳುವ ಚೀನಾಗೆ ಆಸ್ಟ್ರೇಲಿಯಾ ಸರಿಯಾಗಿ ಪಾಠ ಕಲಿಸಿದೆ. ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ & ಇನಿಶಿಯೇಟಿವ್ ಯೋಜನೆ ಸಂಬಂಧ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಿದೆ. ದೇಶದ ಭದ್ರತೆ ದೃಷ್ಟಿಯಿಂದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 2018-19ರಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಆದ್ರೀಗ ಆಸ್ಟ್ರೇಲಿಯಾದಲ್ಲಿ ಜಾರಿಗೆ ಬಂದಿರೋ ಹೊಸ ಕಾನೂನು ವಿದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಪರಿಶೀಲಿಸಲು ವಿದೇಶಾಂಗ ಸಚಿವರಿಗೆ ಅವಕಾಶ ನೀಡುತ್ತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಮರಿಸೇ ಪೈನೆ, ಈ ಕಾನೂನಿನ ಅಡಿಯಲ್ಲಿ 4 ಒಪ್ಪಂದಗಳನ್ನು ರದ್ದು ಮಾಡಲು ನಿರ್ಧರಿಸಿದ್ದೇವೆ. ಅದರಲ್ಲಿ ಚೀನಾ ಜೊತೆಗೆ ವಿಕ್ಟೋರಿಯಾ ರಾಜ್ಯ 2018-19ರಲ್ಲಿ ಮಾಡಿಕೊಂಡಿದ್ದ ಬೆಲ್ಟ್ & ರೋಡ್ ಇನಿಶಿಯೇಟಿವ್ ಕೂಡ ಸೇರಿದೆ. ಈ ಒಪ್ಪಂದಗಳು ನಮ್ಮ ವಿದೇಶಾಂಗ ನೀತಿಗೆ ವಿರುದ್ಧವಾಗಿದ್ದು, ವಿದೇಶಾಂಗ ಸಂಬಂಧಗಳಿಗೆ ಪ್ರತಿಕೂಲವಾಗಿದೆ ಅಂತ ಮಾಹಿತಿ ನೀಡಿದ್ದಾರೆ. ಅಂದಹಾಗೆ ಆಸ್ಟ್ರೇಲಿಯಾ ಸರ್ಕಾರ ವಿರೋಧಿಸಿದ್ರೂ ಕೂಡ ಚೀನಾ ವಿಕ್ಟೋರಿಯಾ ರಾಜ್ಯದೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಈ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಅದು ರದ್ದಾಗಿದೆ. ಈ ಬಗ್ಗೆ ಫುಲ್ ಉರಿದುಕೊಂಡಿರೋ ಚೀನಾ, ಆಸ್ಟ್ರೇಲಿಯಾ ಕಾರಣವೇ ಇಲ್ಲದೆ ತೆಗೆದುಕೊಂಡ ಪ್ರಚೋದನಾತ್ಮಕ ಹೆಜ್ಜೆ ಇಟ್ಟಿದೆ. ಚೀನಾ ಮತ್ತು ಆಸ್ಟ್ರೇಲಿಯಾ ಸಂಬಂಧವನ್ನು ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾಗೆ ಯಾವುದೇ ಇಚ್ಛೆಯಿಲ್ಲ ಅನ್ನೋದನ್ನ ಇದು ತೋರಿಸುತ್ತೆ ಅಂತ ಗುಡುಗಿದೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ವ್ಯಾಪಾರ ಯುದ್ಧ ನಡೆಸುತ್ತಿರುವ ಚೀನಾ, ಈಗ ಯಾವ ಹೆಜ್ಜೆ ಇಡುತ್ತೆ ಅಂತ ಕಾದು ನೋಡಬೇಕಿದೆ.

-masthmagaa.com

Contact Us for Advertisement

Leave a Reply