ಹಳದಿ ಸಮುದ್ರದಲ್ಲಿ ಚೀನಾದ ಅಪಯಕಾರಿ ನಡೆ ಖಂಡಿಸಿದ ಆಸ್ಟ್ರೇಲಿಯಾ!

masthmagaa.com:

ಚೀನಾದ ಕುತಂತ್ರ ಚಟುವಟಿಕೆಗಳಿಗೆ ಈಗ ಆಸ್ಟ್ರೇಲಿಯಾ ಕೂಡ ಖಂಡನೆ ವ್ಯಕ್ತಪಡಿಸಿದೆ. ಪಶ್ಚಿಮ ಪೆಸಿಫಿಕ್‌ ಮಹಾಸಾಗರದ ಹಳದಿ ಸಮುದ್ರ ಭಾಗದಲ್ಲಿ ಆಸ್ಟ್ರೇಲಿಯಾದ ಮಿಲಿಟರಿ ಹೆಲಿಕಾಪ್ಟರ್‌ ಎಂದಿನಂತೆ ಗಸ್ತು ತಿರುಗ್ತಿತ್ತು. ಈ ವೇಳೆ ಅಲ್ಲಿಗೆ ದಿಢೀರ್‌ ಅಂತ ಹಾಜರಾದ ಚೀನಿ ಯುದ್ದ ವಿಮಾನ ಆಸ್ಟ್ರೇಲಿಯಾದ ಈ ಹೆಲಿಕಾಪ್ಟರ್‌ ಮೇಲೆ flares ಡ್ರಾಪ್‌ ಮಾಡಿದೆ. ಹೀಗಾಗಿ ಚೀನಾದ ಈ ನಡೆಯನ್ನ ಖಂಡಿಸಿರೋ ಆಸ್ಟ್ರೇಲಿಯಾ, ʻಚೀನಾದ ಇಂತಹ ಅಪಾಯಕಾರಿ ವರ್ತನೆಯನ್ನ ನಾವು ಸ್ವಲ್ಪಾನೂ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲʼ ಅಂತೇಳಿದೆ.

-masthmagaa.com

Contact Us for Advertisement

Leave a Reply