ಚೀನಾಗೆ ಆಸ್ಟ್ರೇಲಿಯಾ ಪೆಟ್ಟು: ಚೀನಾ ಕಂಪನಿ ಜೊತೆಗಿನ​ ಒಪ್ಪಂದ ಮುರಿಯಲು ಚಿಂತನೆ

masthmagaa.com:

ಇನ್ನು ಆಸ್ಟ್ರೇಲಿಯಾ ಮತ್ತು ಚೀನಾ ನಡುವಿನ ಸಂಘರ್ಷ ಕೂಡ ಜೋರಾಗಿದೆ. ಉತ್ತರ ಆಸ್ಟ್ರೇಲಿಯಾದ ಡಾರ್ವಿನ್​ ನಗರದಲ್ಲಿರೋ ಮಿಲಿಟರಿ ಬಂದರನ್ನ ಚೀನಾ ಮೂಲದ ಕಂಪನಿಗೆ ಲೀಸ್​ಗೆ ಕೊಟ್ಟಿರೋ ನಿರ್ಧಾರವನ್ನ ಪುನರ್ ಪರಿಶೀಲಸಲು ಆಸ್ಟ್ರೇಲಿಯಾ ಮುಂದಾಗಿದೆ. ಚೀನಾದ ಲ್ಯಾಂಡ್​ಬ್ರಿಜ್​ ಗ್ರೂಪ್​​ಗೆ ಈ ಬಂದರನ್ನ 99 ವರ್ಷ ಕಾಲ ಲೀಸ್​ಗೆ ಕೊಡಲು 2015ರಲ್ಲಿ ಒಪ್ಪಂದವಾಗಿತ್ತು. ಆದ್ರೆ ಲ್ಯಾಂಡ್​ಬ್ರಿಜ್​ ಕಂಪನಿಯು ಚೀನಾ ಸೇನೆ ಜೊತೆ ನಿಕಟ ಸಂಬಂಧ ಹೊಂದಿದೆ ಅಂತ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಚೀನಾ ಕಂಪನಿಗೆ ಆಸ್ಟ್ರೇಲಿಯಾ ತನ್ನ ಮಿಲಿಟರಿ ಬಂದರನ್ನ ಲೀಸ್​ಗೆ ಕೊಡ್ತಿರೋದು ಅಮೆರಿಕದ ಹುಬ್ಬೇರುವಂತೆ ಮಾಡಿತ್ತು. 2015ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್​ ಒಬಾಮಾ ಈ ಬಗ್ಗೆ ಅಂದಿನ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೋಮ್ ಟರ್ನ್​​ಬುಲ್​ ಬಳಿ ಅಸಮಾಧಾನ ವ್ಯಕ್ತಪಡಿಸಿದ್ರು. ಕಳೆದ ವಾರವಷ್ಟೇ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಬಂದರುಗಳ ಮಾಲೀಕತ್ವ ಬಗ್ಗೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದರು. ಇದೀಗ ಅದರಂತೆ ಡಾರ್ವಿನ್​ ಪೋರ್ಟ್​​ನ ಲೀಸ್​ ಚೀನಾ ಕಂಪನಿಗೆ ಕೊಟ್ಟಿದ್ದನ್ನ ಪುನರ್ ಪರಿಶೀಲಸಲು ಮುಂದಾಗಿದೆ. ಇದರಿಂದ ಚೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಲಕ್ಷಣ ಕಾಣ್ತಿದೆ.

-masthmagaa.com

Contact Us for Advertisement

Leave a Reply