ಮಯನ್ಮಾರ್​ ಸೇನೆಯ ವಶದಲ್ಲಿದ್ದ ಆಸ್ಟ್ರೇಲಿಯಾ ಪ್ರಜೆಗಳು ರಿಲೀಸ್

masthmagaa.com:

ಮಯನ್ಮಾರ್​ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ಬಳಿಕ ದೇಶಬಿಟ್ಟು ಓಡಿಹೋಗಲು ಯತ್ನಿಸಿದ ಇಬ್ಬರು ಆಸ್ಟ್ರೇಲಿಯಾ ನಾಗರಿಕರನ್ನ ಮಯನ್ಮಾರ್ ಸೇನೆ ವಶಕ್ಕೆ ಪಡೆದು ಗೃಹ ಬಂಧನದಲ್ಲಿಟ್ಟಿತ್ತು. ಇದೀಗ ಅವರಿಬ್ಬರನ್ನ ಮಯನ್ಮಾರ್ ಸೇನೆ ಬಿಡುಗಡೆ ಮಾಡಿದೆ ಅಂತ ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆ ತಿಳಿಸಿದೆ. ಇಬ್ಬರೂ ಕೂಡ ಮಯನ್ಮಾರ್​ನಲ್ಲಿ ಬ್ಯುಸಿನೆಸ್​ ಕನ್ಸಲ್ಟೆಂಟ್​ ಆಗಿ ಕೆಲಸ ಮಾಡ್ತಿದ್ರು. ಆದ್ರೆ ಮತ್ತೊಬ್ಬ ಆಸ್ಟೇಲಿಯಾ ಪ್ರಜೆ, ಚುನಾಯಿತ ನಾಯಕಿ ಆಂಗ್ ಸಾನ್ ಸೂ ಕಿಗೆ ಆರ್ಥಿಕ ಸಲಹೆಗಾರರಾಗಿದ್ದ ಸೀನ್ ಟರ್ನೆಲ್​ ಇನ್ನೂ ಮಯನ್ಮಾರ್ ಸೇನೆಯ ವಶದಲ್ಲೇ ಇದ್ದಾರೆ. ಅವರ ಬಿಡುಗಡೆಗೂ ಆಸ್ಟ್ರೇಲಿಯಾ ಒತ್ತಾಯಿಸುತ್ತಿದೆ.

-masthmagaa.com

Contact Us for Advertisement

Leave a Reply