ಉತ್ತರ ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ!

masthmagaa.com:

ಮುಂದಿನ ತಿಂಗಳಿಂದ ವಿದೇಶಿ ಪ್ರಯಾಣದ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆಯುತ್ತೀವಿ ಅಂತ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಕೊರೋನಾ ಬಂದ ಬಳಿಕ ಅಂದ್ರೆ ಕಳೆದ 18 ತಿಂಗಳಿಂದ ಆಸ್ಟ್ರೇಲಿಯನ್ನರಿಗೆ ವಿದೇಶಿ ಪ್ರಯಾಣ ಬಂದ್ ಮಾಡಲಾಗಿತ್ತು. ಇದೀಗ ಅಂತಾರಾಷ್ಟ್ರೀಯ ಗಡಿಯನ್ನು ಓಪನ್ ಮಾಡಿ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಈ ಘೋಷಣೆ ಮಾಡುವಾಗ, ಆಸ್ಟ್ರೇಲಿಯನ್ನರಿಗೆ ಅವರ ಜೀವನವನ್ನು ವಾಪಸ್ ನೀಡುವ ಸಮಯ ಬಂದಿದೆ. ನಾವು ಜೀವ, ಜೀವನಗಳನ್ನು ಉಳಿಸಿದ್ದೀವಿ ಅಂತ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಇದ್ರ ಜೊತೆಗೆ ಚೀನಾದ ಸಿನೋವ್ಯಾಕ್ ಮತ್ತು ಭಾರತದ ಕೋವಿಶೀಲ್ಡ್ ಲಸಿಕೆಗೆ ಆಸ್ಟ್ರೇಲಿಯಾ ಮಾನ್ಯತೆ ನೀಡಿದೆ. ಈ ಲಸಿಕೆ ಹಾಕಿಸಿಕೊಂಡ ವಿದೇಶಿಯರು ಈಗ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಬಹುದಾಗಿದೆ.

-masthmagaa.com

Contact Us for Advertisement

Leave a Reply