ಚೀನಾಗೆ ಟಕ್ಕರ್‌ ಕೊಡಲು ಸೇನಾ ಸುಧಾರಣೆಗೆ ಮುಂದಾದ ಆಸ್ಟ್ರೇಲಿಯಾ!

masthmagaa.com:

ಈಗಾಗಲೇ ಚೀನಾದ ಪ್ರಚೋದನಾಕಾರಿ ಕ್ರಮಗಳನ್ನ ಎದುರಿಸುವ ನಿಟ್ಟಿನಲ್ಲಿ ಜಪಾನ್‌ ತನ್ನ ಸೇನೆಯಲ್ಲಿ ಹಿಂದೆಂದು ಮಾಡಿರದ ಬದಲಾವಣೆ ಮಾಡೋಕೆ ಅತಿದೊಡ್ಡ ಯೋಜನೆಯೊಂದನ್ನ ರಿವೀಲ್‌ ಮಾಡಿತ್ತು. ಇದೀಗ ಇದರ ಸಾಲಿಗೆ ಆಸ್ಟ್ರೇಲಿಯಾ ಕೂಡ ಸೇರಿದೆ. ಕಳೆದ 35 ವರ್ಷಗಳ ಇತಿಹಾಸದಲ್ಲೇ ಅತಿದೊಡ್ಡ ಮಿಲಿಟರಿ ರಿಫಾರ್ಮ್‌ ಮಾಡೋಕೆ ಆಸ್ಟ್ರೇಲಿಯಾ ಮುಂದಾಗಿದೆ. ಚೀನಾದ ಬೆದರಿಕೆಯನ್ನ ಎದುರಿಸುತ್ತಿರುವ ಆಸ್ಟ್ರೇಲಿಯಾ, ಶತ್ರುಗಳು ತಮ್ಮನ್ನ ತಲುಪುವ ಮೊದಲೇ ಅವ್ರನ್ನ ತಡೆಗಟ್ಟುವ ಸಾಮರ್ಥ್ಯವನ್ನ ಬೆಳೆಸಿಕೊಳ್ಳೊಕೆ ರೆಡಿಯಗ್ತಿದೆ. 35 ವರ್ಷಗಳಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ರಕ್ಷಣಾ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳನ್ನ ತರ್ತಿದ್ದೇವೆ ಅಂತ ಅಲ್ಲಿನ ರಕ್ಷಣಾ ಸಚಿವ ರಿಚರ್ಡ್‌ ಮಾರ್ಲ್ಸ್‌ ಹೇಳಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಸಾರ್ವಭೌಮತ್ವವನ್ನ ಸಾಧಿಸೋ ಚೀನಾದ ಕ್ರಮ ಜಾಗತಿಕ ನಿಯಮಗಳಿಗೆ ಬೆದರಿಕೆಯಾಗಿದ್ರೆ, ಇಂಡೋ ಪೆಸಿಫಿಕ್‌ ಪ್ರದೇಶದಲ್ಲಿನ ಚೀನಾದ ಕ್ರಮಗಳು ಆಸ್ಟ್ರೇಲಿಯಾದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಆಸ್ಟ್ರೇಲಿಯಾ ಮಿಲಿಟರಿ ರಿಫಾರ್ಮ್‌ಗೆ ಮುಂದಾಗಿದೆ ಎಂದಿದ್ದಾರೆ. ಅಲ್ದೇ ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಈಗಾಗಲೇ ಲಾಂಗ್‌ ರೇಂಜ್‌ ನ್ಯೂಕ್ಲಿಯಾರ್‌ ಸಾಮರ್ಥ್ಯದ ಸಬ್‌ಮರೀನ್‌ಗಳನ್ನ ಅಭಿವೃದ್ದಿಪಡಿಸೋದಾಗಿ ಅನೌನ್ಸ್‌ ಮಾಡಿದೆ. ತನ್ನ ಕಡಲ ರಕ್ಷಣೆ ಬಗ್ಗೆ ಹೆಚ್ಚು ಫೋಕಸ್‌ ಮಾಡ್ತಿರೊ ಆಸ್ಟ್ರೇಲಿಯಾ ನೌಕಾಪಡೆಯ ಗಾತ್ರವನ್ನ ಹೆಚ್ಚಿಸೋ ಕುರಿತು ಗಮನ ಹರಿಸ್ತಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply