ಭಾರತದಿಂದ ಈ ದೇಶಕ್ಕೆ ಹೋದ್ರೆ ಬೀಳುತ್ತೆ 38 ಲಕ್ಷ ರೂ ದಂಡ, 5 ವರ್ಷ ಜೈಲು

masthmagaa.com:

ಭಾರತದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿರೋ ಹಿನ್ನೆಲೆ ಜಗತ್ತಿನ ವಿವಿಧ ದೇಶಗಳು ಭಾರತದಿಂದ ಬರುವ ವಿಮಾನಗಳ ಮೇಲೆ, ಅಲ್ಲಿಂದ ಬರುವ ಪ್ರಯಾಣಿಕರ ಮೇಲೆ ನಿಷೇಧ ಹೇರ್ತಿವೆ. ಆಸ್ಟ್ರೇಲಿಯಾ ಕೂಡ ಇತ್ತೀಚೆಗೆ ಭಾರತದಿಂದ ಬರುವ ಡೈರೆಕ್ಟ್ ಫ್ಲೈಟ್​ಗಳನ್ನ ಬ್ಯಾನ್ ಮಾಡಿತ್ತು. ಆದ್ರೆ ಭಾರತದಲ್ಲಿದ್ದ ಕೆಲವರು ಬೇರೆ ದೇಶಕ್ಕೆ ಹೋಗಿ ಅಲ್ಲಿಂದ ಆಸ್ಟ್ರೇಲಿಯಾಗೆ ಬರ್ತಿದ್ದಾರೆ. ಇದನ್ನ ಗಮನಿಸಿರೋ ಆಸ್ಟ್ರೇಲಿಯಾ ಸರ್ಕಾರ, ಭಾರತದಿಂದ ಆಸ್ಟ್ರೇಲಿಯಾಗೆ ಬರಲು ಪ್ರಯತ್ನಿಸೋರ ಮೇಲೆ ಭಾರಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸೋದಾಗಿ ಹೇಳಿದೆ. ಕಳೆದ 14 ದಿನಗಳಿಂದ ಭಾರತದಲ್ಲಿದ್ದು ಆಸ್ಟ್ರೇಲಿಯಾಗೆ ಬರುವವರಿಗೆ 66,600 ಡಾಲರ್​ವರೆಗೆ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ವಿಧಿಸಲು ಅಥವಾ ಎರಡನ್ನೂ ವಿಧಿಸುವ ಕಾನೂನನ್ನ ಆಸ್ಟ್ರೇಲಿಯಾ ಜಾರಿಗೆ ತಂದಿದೆ. ಆಸ್ಟ್ರೇಲಿಯಾದ 1 ಡಾಲರ್ ಅಂದ್ರೆ ಭಾರತದ 57 ರೂಪಾಯಿ ಆಗುತ್ತೆ. 66,600 ಡಾಲರ್ ಅಂದ್ರೆ ಸುಮಾರು 38 ಲಕ್ಷ ರೂಪಾಯಿ ಆಗುತ್ತೆ. ಈ ನಿಯಮಗಳು ಒಂದ್​ರೀತಿ ಶಾಕಿಂಗ್ ಅನಿಸಿದ್ರೂ ಈಗಿನ ಪರಿಸ್ಥಿತಿಗೆ ತುಂಬಾ ಅವಶ್ಯಕವಾಗಿದೆ. ಭಾರತದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣ ವರದಿಯಾಗ್ತಿದೆ. ಹೀಗಾಗಿ ಇಂತಹ ಕ್ರಮಗಳನ್ನ ಕೈಗೊಳ್ಳೋದು ಅನಿವಾರ್ಯವಾಗಿದೆ ಅಂತ ಆಸ್ಟ್ರೇಲಿಯಾ ಸರ್ಕಾರ ತನ್ನ ನಿರ್ಧಾರವನ್ನ ಸಮರ್ಥಿಸಿಕೊಂಡಿದೆ. ಭಾರತದಿಂದ ಕದ್ದುಮುಚ್ಚಿ ಆಸ್ಟ್ರೇಲಿಯಾಗೆ ಬರೋರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ನಿಯಮ ಮೇ 3ರಿಂದ ಮೇ 15ರವರೆಗೆ ಜಾರಿಯಲ್ಲಿರುತ್ತೆ. ಅಂದ್ಹಾಗೆ ಭಾರತದಲ್ಲಿ ನಡೀತಿರೋ ಐಪಿಎಲ್​ನಲ್ಲಿ ಭಾಗವಹಿಸಿದ್ದ ಇಬ್ಬರು ಆಸ್ಟ್ರೇಲಿಯಾ ಕ್ರಿಕೆಟಿಗರು ಕುವೈಟ್​ಗೆ ಹೋಗಿ ಅಲ್ಲಿಂದ ಆಸ್ಟ್ರೇಲಿಯಾಗೆ ವಾಪಸ್ ಬಂದಿದ್ದರು. ಇದರ ಬೆನ್ನಲ್ಲೇ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಮುಂದಾಗಿದೆ ಆಸ್ಟ್ರೇಲಿಯಾ ಸರ್ಕಾರ.

-masthmagaa.com

Contact Us for Advertisement

Leave a Reply