ಪತಿಯನ್ನು ಕೊಂದ ʻHow To Murder Your Husbandʼ ಲೇಖಕಿ!

masthmagaa.com:

How To Murder Your Husbandʼ ಪ್ರಬಂಧವನ್ನ ಬರೆದ ಲೇಖಕಿಯೊಬ್ರು ತನ್ನ ಗಂಡನನ್ನ ಕೊಂದಿದ್ರು ಅಂತ ಈಗ ವರದಿಯಾಗಿದೆ. ಈ ಸಂಬಂಧ ಈಗ 71 ವರ್ಷದ ನ್ಯಾನ್ಸಿ ಕ್ರಮ್‌ಟನ್‌ ಬ್ರೋಫಿ ಅನ್ನೋ ಲೇಖಕಿಗೆ ಶಿಕ್ಷೆ ವಿಧಿಸಲಾಗಿದೆ. 63 ವರ್ಷದ ಡೇನಿಯಲ್‌ ಬ್ರೋಫಿ 2018ರಲ್ಲಿ ಹತ್ಯೆಯಾಗಿದ್ರು. ಅವ್ರ ದೇಹದ ಮೇಲೆ ಗುಂಡಿನ ಗಾಯಗಳಿದ್ವು. ಘಟನೆ ನಡೆದು 3 ತಿಂಗಳ ನಂತ್ರ ಪತ್ನಿ ನ್ಯಾನ್ಸಿ ಮೇಲೆ ಕೊಲೆ ಅರೋಪ ಹೊರಿಸಿ ಆಕೆಯನ್ನ ಬಂಧಿಸಲಾಗಿತ್ತು. ಈಗ ಮಲ್ಟ್‌ನೋಮಾ ಕೌಂಟಿ ಜೂರಿ ನ್ಯಾನ್ಸಿ ಅವ್ರನ್ನ ಸೆಕೆಂಡ್‌ ಡಿಗ್ರಿ ಮರ್ಡರ್‌ ಅಂದ್ರೆ ಪೂರ್ವಯೋಜಿತವಲ್ಲದ ಅಥವಾ ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದಲ್ಲಿ ತಪಿಸ್ಥರೆಂದು ತೀರ್ಪು ನೀಡಿದೆ.

-masthmagaa.com

Contact Us for Advertisement

Leave a Reply