ಗುಜುರಿ ಸ್ಕ್ರಾಪ್​​ಗೆ ಹಾಕೋರಿಗೆ ಕೇಂದ್ರ ಹೊಸ ವಿನಾಯಿತಿ!

masthmagaa.com:

ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ವೆಹಿಕಲ್ ಸ್ಕ್ರಾಪಿಂಗ್​​ ಪಾಲಿಸಿಗೆ ಸಂಬಂಧಪಟ್ಟಂತೆ ಒಂದಷ್ಟು ಪ್ರೋತ್ಸಾಹ ಮತ್ತು ನಿರುತ್ತೇಜನಗೊಳಿಸೋ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ. ಯಾರೆಲ್ಲಾ ಹಳೆಯ ವಾಹನಗಳನ್ನು ಗುಜುರಿಗೆ ಹಾಕ್ತಾರೋ ಅಂಥವರು ಹೊಸ ವಾಹನ ಖರೀದಿಸುವಾಗ ರಿಜಿಸ್ಟ್ರೇಷನ್ ಫೀಸ್​ ಇರೋದಿಲ್ಲ. ಅದೇ ರೀತಿ ಹಳೇ ಗಾಡಿಗಳ ಖರೀದಿ ಮತ್ತು ಓಡಾಟವನ್ನ ನಿರುತ್ತೇಜಿಸಲು/Discourage ಮಾಡಲೂ ಕ್ರಮಗಳನ್ನ ಘೋಷಿಸಲಾಗಿದೆ. ಮುಂದಿನ ವರ್ಷ, ಅಂದ್ರೆ 2022ರ ಏಪ್ರಿಲ್ ನಿಂದ ಹಳೇ ಗಾಡಿಗಳು ಬಾಳ ಕಾಸ್ಟ್ಲಿ ಆಗಲಿವೆ. 15 ವರ್ಷ ಹಾಗೂ ಅದಕ್ಕಿಂತ ಹಳೆಯ ಕಾರು ಹಾಗೂ ಇತರೆ ಹೆವಿ ವಾಹನಗಳನ್ನ ರಿಜಿಸ್ಟ್ರೇಶನ್ ಮಾಡಿಸಲು ಈಗ ಇರೋ ಚಾರ್ಜ್ ಗಿಂತ 8 ಪಟ್ಟು ಜೆಚ್ಚು ಚಾರ್ಜಸ್ ಕೊಡಬೇಕಾಗುತ್ತೆ. ಜೊತೆಗೆ ಫಿಟ್ನೆಸ್ ಸರ್ಟಿಫಿಕೇಟ್ ತಗೊಳೋಕೂ ಜಾಸ್ತಿ ಚಾರ್ಜಸ್ ಆಗುತ್ತೆ. ಕೇಂದ್ರ ಸಾರಿಗೆ ಇಲಾಖೆ ಈ ಸಂಬಂಧ ಆದೇಶವನ್ನೂ ಜಾರಿ ಮಾಡಿದೆ.

-masthmagaa.com

Contact Us for Advertisement

Leave a Reply