ಗ್ರಾಹಕನ ಬಳಿ ಕ್ಷಮೆ ಕೇಳಿದ ಟೆಸ್ಲಾ! ಯಾಕೆ ಗೊತ್ತಾ?

masthmagaa.com:

ಟೆಸ್ಲಾ ತನ್ನ ಕಸ್ಟಮರ್ ಒಬ್ಬರ ಕಂಪ್ಲೆಂಟ್​​ಗೆ ಸರಿಯಾಗಿ ಪ್ರತಿಕ್ರಿಯಿಸದೇ ಇದ್ದಿದ್ದಕ್ಕೆ ಕ್ಷಮೆಯಾಚಿಸಿದೆ. ಚೀನಾದ ಮಹಿಳಾ ಕಸ್ಟಮರ್ ಒಬ್ಬರು ಟೆಸ್ಲಾ ಕಾರಿನಲ್ಲಿರೋ ಬ್ರೇಕ್ ಸಮಸ್ಯೆ ಮತ್ತು ಅದಕ್ಕೆ ಸಂಬಂಧಿಸಿದ ದೂರಿಗೆ ಪ್ರತಿಕ್ರಿಯಿಸಿದಿರೋ ಬಗ್ಗೆ ಟೆಸ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಈ ವಿಡಿಯೋ ಸೋಷಿಯಲ್ ಮೀಡಿಯಾ ಮತ್ತು ಸುದ್ದಿ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿತ್ತು. ತುಂಬಾ ಚರ್ಚೆಗೆ ಕಾರಣವಾಗಿತ್ತು. ಅದ್ರ ಬೆನ್ನಲ್ಲೇ ತನ್ನ ಗ್ರಾಹಕನ ಬಳಿ ಟೆಸ್ಲಾ ಕ್ಷಮೆಯಾಚಿಸಿದೆ. ಈ ನಡುವೆ ಟೆಸ್ಲಾಗೆ ಒಂದೊಂದೇ ಸಮಸ್ಯೆ ಎದುರಾಗ್ತಿದೆ. ಚೀನಾದಲ್ಲಿ ಟೆಸ್ಲಾದ ಒಟ್ಟು ಶೇ.30ರಷ್ಟು ಕಾರುಗಳು ಮಾರಾಟವಾಗಿದ್ದು, ಹಲವು ಕಂಪ್ಲೆಂಟ್​​ಗಳು ಕೇಳಿ ಬರುತ್ತಿವೆ.. ಅದ್ರಲ್ಲೂ ಬ್ಯಾಟರಿಗೆ ಸಂಬಂಧಿಸಿದ ದೂರುಗಳು ಜಾಸ್ತಿಯೇ ಇವೆ. ಇತ್ತೀಚೆಗಷ್ಟೇ ಅಮೆರಿಕ ಟೆಕ್ಸಾಸ್​​ನಲ್ಲಿ ಟೆಸ್ಲಾದ ಭಾಗಶಃ ಸ್ವಯಂ ಚಾಲಿತ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಇಂತಹ ಒಟ್ಟು 24 ಪ್ರಕರಣಗಳ ಕುರಿತು ತನಿಖೆ ನಡೀತಾ ಇದೆ.

-masthmagaa.com

Contact Us for Advertisement

Leave a Reply