ಅಯೋಧ್ಯೆ ಶ್ರೀರಾಮ ಮಂದಿರದ ಅರ್ಚಕರ ಹುದ್ದೆಗಾಗಿ ನಡೀತಿದೆ ಇಂಟರ್‌ವ್ಯೂ!

masthmagaa.com:

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗ್ತಿದ್ದು, ಜನವರಿ 22ಕ್ಕೆ ಶ್ರೀರಾಮಲಲ್ಲಾ ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಈ ಮಧ್ಯೆ ಸಕಲ ಸಿದ್ದತೆಗಳೊಂದಿಗೆ ನೂತನ ಮಂದಿರದಲ್ಲಿ ಪೂಜಾ ನೀತಿ ಸಂಹಿತೆ ಹೇಗಿರ್ಬೇಕು ಅಂತ ನಿಯಮಗಳನ್ನ ರೂಪಿಸಲಾಗ್ತಿದೆ. ಹೀಗಾಗಿ ನೂತನ ಮಂದಿರದಲ್ಲಿ ಪೂಜೆಗೆ ತರಬೇತಿ ಪಡೆದ ಅರ್ಚಕರನ್ನ ನೇಮಿಸೋದಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಇದಕ್ಕಾಗಿ ಟ್ರಸ್ಟ್ ಅರ್ಚಕರ ಹುದ್ದೆಗಾಗಿ ಇತ್ತೀಚೆಗಷ್ಟೇ ಅರ್ಜಿ ಆಹ್ವಾನಿಸಿತ್ತು. ಅಕ್ಟೋಬರ್ 31ರವರೆಗೆ ಬರೋಬ್ಬರಿ 2 ಸಾವಿರ ವೈದಿಕರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ರು. ಭಾನುವಾರ ಅಂದ್ರೆ ನೆನ್ನೆಯಿಂದ ಅವ್ರ ಇಂಟರ್‌ವ್ಯೂ ಕೂಡ ಆರಂಭವಾಗಿದೆ. ಇಲ್ಲಿಯವರೆಗೆ 115 ವೈದಿಕ ಪಂಡಿತರ ಇಂಟರ್‌ವ್ಯೂ ನಡೆಸಲಾಗಿದೆ. ಸದ್ಯ ನಡೆಸಿದ ಇಂಟರ್‌ವ್ಯೂನಲ್ಲಿ ಸುಮಾರು 50 ಅರ್ಚಕರನ್ನ ಸೆಲೆಕ್ಟ್‌ ಮಾಡಲಾಗುತ್ತೆ ಅಂತ ಟ್ರಸ್ಟ್ ತಿಳಿಸಿದೆ. ಇನ್ನು ಇಂಟರ್‌ವ್ಯೂ ನಂತರ ಪರೀಕ್ಷೆ ಇರಲಿದ್ದು, ಅದ್ರಲ್ಲಿ ಉತ್ತೀರ್ಣರಾದವ್ರನ್ನ ಅರ್ಚಕರಾಗಿ ಆಯ್ಕೆ ಮಾಡಲಾಗ್ತದೆ. ಆಯ್ಕೆಯಾದ ಅರ್ಚಕರಿಗೆ ಡಿಸೆಂಬರ್‌ನಿಂದ ಟ್ರೈನಿಂಗ್‌ ಕೂಡ ಆರಂಭವಾಗಲಿದೆ ಅಂತ ಟ್ರಸ್ಟ್‌ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply