ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ! 12.8 ಕೋಟಿ ರೂಪಾಯಿ ಕಲೆಕ್ಷನ್‌!

masthmagaa.com:

ಅಯೋಧ್ಯೆ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯಾದ ನಂತ್ರ ಕೇವಲ ಭಕ್ತರ ಆಗಮನ ಮಾತ್ರವಲ್ದೇ ಮಂದಿರಕ್ಕೆ ಭಾರೀ ಡೊನೇಷನ್‌ ಕೂಡ ಹರಿದು ಬಂದಿದೆ. ಪ್ರಾಣ ಪ್ರತಿಷ್ಠಾಪನೆಗೊಂಡ ಕೇವಲ 15 ದಿನಗಳಲ್ಲಿ ರಾಮಮಂದಿರಕ್ಕೆ ಬರೋಬ್ಬರಿ 12.8 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಬಂದಿದೆ. ಅಂದ್ಹಾಗೆ ಕಳೆದ 15 ದಿನಗಳಲ್ಲಿ ಶ್ರೀರಾಮಮಂದಿರಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಇದೀಗ 30 ಲಕ್ಷಕ್ಕೆ ರೀಚ್‌ ಆಗಿದೆ. ಅಂದ್ರೆ ಪ್ರತೀ ದಿನ 2 ಲಕ್ಷದಂತೆ ಭಕ್ತಾದಿಗಳು ಮಂದಿರಕ್ಕೆ ಆಗಮಿಸ್ತಿದ್ದಾರೆ.

-masthmagaa.com

Contact Us for Advertisement

Leave a Reply