ಮೈಸೂರಲ್ಲಿ ಆಯುಧ ಪೂಜೆ ಸಂಭ್ರಮ ಹೇಗಿತ್ತು ಗೊತ್ತಾ..?

ಮೈಸೂರಿನ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದೆ. ರಾಜರ ಯುದ್ಧ ಸಲಕರಣೆಗಳು, ಪಟ್ಟದ ಆನೆ, ಕುದುರೆಗಳಿಗೆ ಮಹಾರಾಜ ಯದುವೀರ್ ಪೂಜೆ ಸಲ್ಲಿಸಿದ್ರು. ಮೊದಲಿಗೆ ಕೋಡಿ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾರಂಪರಿಕ ಆಯುಧಗಳನ್ನು ದೇವಾಲಯದಲ್ಲಿರಿಸಿ ಪೂಜೆ ಸಲ್ಲಿಸಲಾಯ್ತು. ನಂತರ ಅವುಗಳನ್ನು ಮೆರವಣಿಗೆ ಕೊಂಡೊಯ್ಯಲಾಯ್ತು. ನಂತರ ಅರಮನೆ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಯದುವೀರ್ ಪೂಜೆ ಸಲ್ಲಿಸಿದ್ರು.

ಸಂಜೆ ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆ ಮಾಡಿ, ದೇವರ ಮನೆಯಲ್ಲಿ ಯದುವೀರ್ ಒಡೆಯರ್ ಗೆ ಕಟ್ಟಲಾಗಿರುವ ಕಂಕಣ ವಿಸರ್ಜನೆ ಮಾಡಲಾಗುತ್ತೆ. ಇಂದು 5ನೇ ಬಾರಿಗೆ ಯದುವೀರ್ ಒಡೆಯರ್ ಆಯುಧಪೂಜೆ ನೆರವೇರಿಸಿದ್ರು. ಇನ್ನು ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದ್ದು, ಅದರೊಂದಿಗೆ ದಸರಾ ಉತ್ಸವ ಕೊನೆಗೊಳ್ಳಲಿದೆ.

Contact Us for Advertisement

Leave a Reply