2025ಕ್ಕೆ ಶನಿ ಗ್ರಹದ ಉಂಗುರಗಳು ಮಾಯ! ಕಾರಣ ಏನು?

masthmagaa.com:

ಶನಿ ಗ್ರಹದ ಸುತ್ತ ಇರೋ ಉಂಗುರಗಳು 2025ರಿಂದ ಕೆಲವು ಸಮಯ ಭೂಮಿಯಿಂದ ಗೋಚರಿಸಲ್ಲ ಅಂತ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಶನಿಯ ಸುತ್ತ ಮಂಜುಗೆಡ್ಡೆ, ಬಂಡೆ, ಧೂಳಿನಿಂದ ಕೂಡಿರೋ A,B,C,D,E,F,G ಅನ್ನೊ ಏಳು ರಿಂಗ್‌ಗಳಿವೆ. ಇವು ಶನಿಯನ್ನ ಸ್ಪುರದ್ರೂಪಿಯನ್ನಾಗಿಸಿವೆ. ಶನಿಯ ಮೇಲ್ಮೈಯಿಂದ ಸುಮಾರು 3 ಲಕ್ಷ ಕಿಲೋಮೀಟರ್‌ವರೆಗೆ ಈ ರಿಂಗ್‌ಗಳು ತೆಳುವಾದ ಪದರವನ್ನ ಸೃಷ್ಟಿಸಿವೆ. ಆದ್ರೆ, ಭೂಮಿಯ ಮೇಲೆ ವರ್ಷಕ್ಕೊಮ್ಮೆ ವಿಷ್ವತ್‌ ಸಂಕ್ರಾಂತಿ, ಅಂದ್ರೆ ಸೂರ್ಯನ ಬೆಳಕು ನೇರವಾಗಿ ಭೂಮಧ್ಯರೇಖೆಯ ಮೇಲೆ ಬೀಳೋಹಾಗೆ, ಶನಿ ಗ್ರಹದ ಮೇಲೂ 15 ವರ್ಷಗಳಿಗೊಮ್ಮೆ ಈ ಸಂಕ್ರಾಂತಿ ಬರಲಿದೆ. 2025ಕ್ಕೆ ಶನಿಯ ಈಕ್ವೆಟರ್‌ ಸೂರ್ಯನ ಕಡೆಗೆ ಮುಖ ಮಾಡಲಿದೆ. ಈ ವೇಳೆ ಭೂಮಿ ಹಾಗೂ ಶನಿಗ್ರಹಗಳು ಒಂದೇ ಕೋನದಲ್ಲಿ ಇರಲಿವೆ, ಅಂದ್ರೆ ಸಧ್ಯ 9 ಡಿಗ್ರಿ ಓರೆಯಾಗಿರೊ ಶನಿ, 2025ರ ವೇಳೆಗೆ 0 ಡಿಗ್ರಿಯಲ್ಲಿರುತ್ತಾನೆ. ಹಾಗಾಗಿ ಉಂಗುರಗಳ ತೆಳುವಾದ ಪದರಗಳು ಕಾಣಸಿಗೊಲ್ಲ ಅಂತ ನಾಸಾ ವಿಜ್ಷಾನಿಗಳು ಹೇಳಿದ್ದಾರೆ. ಅಲ್ಲಿಗೆ ನಾವು ಟೆಲಿಸ್ಕೋಪ್‌ನಲ್ಲಿ ನೋಡಿದ್ರೆ ಶನಿಯ ಅತ್ಯಂತ ಆಚೆಗಿರುವ ಉಂಗುರದ ಅಂಚಿನ ಕೆಲವು ಬಂಡೆಗಳು ಕಾಣಸಿಗ್ಬೋದು ಅಷ್ಟೆ. ಮತ್ತೆ ಕೆಲವು ವರ್ಷಗಳಲ್ಲಿ ಉಂಗುರಗಳು ಪುನಃ ಗೋಚರಿಸಲಿವೆ.

-masthmagaa.com

Contact Us for Advertisement

Leave a Reply