ಮಾಲ್ಡೀವ್ಸ್‌ನಲ್ಲಿ ಏ.21ಕ್ಕೆ ಜನರಲ್‌ ಎಲೆಕ್ಷನ್:‌ ಭಾರತದಲ್ಲಿ ಮತದಾನ!

masthmagaa.com:

ಭಾರತದ ವಿರುದ್ದ ಮುನ್ಸ್ಕೊಂಡು ಮುಜುಗರಕ್ಕೀಡಾಗಿರೋ ಮಾಲ್ಡೀವ್ಸ್‌ ಮುಂಬರೊ ಏಪ್ರಿಲ್‌ 21ರ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗ್ತಿದೆ. ಆದರೆ ಮಾಲ್ಡೀವ್ಸ್‌ನ ಸಾರ್ವತ್ರಿಕ ಚುನಾವಣೆಗೆ ಭಾರತ ಸೇರಿದಂತೆ ಶ್ರೀಲಂಕಾ ಹಾಗೂ ಮಲೇಷಿಯಾಗಳಲ್ಲೂ ಮತದಾನ ಪೆಟ್ಟಿಗೆ ಇರಿಸಲಾಗುವುದು ಅಂತ ಖುದ್ದು ಮಾಲ್ಡೀವ್ಸ್‌ನ ಚುನಾವಣಾ ಆಯೋಗವೇ ಹೇಳಿದೆ. ಕೇರಳದ ತಿರುವನಂತಪುರಂ, ಶ್ರೀಲಂಕಾ ಮತ್ತು ಮಲೇಷಿಯಾ ದೇಶಗಳಿಂದ ತಲಾ ಮಾಲ್ಡೀವ್ಸ್‌ನ 150 ಪ್ರಜೆಗಳು ಮತದಾನಕ್ಕೆ ನೊಂದಣಿ ಮಾಡಿದ್ದಕ್ಕಾಗಿ ಈ ಮತ ಪೆಟ್ಟಿಗೆ ವ್ಯವಸ್ಥೆ ಮಾಡಲಾಗುವುದು ಅಂತ ಮಾಲ್ಡೀವ್ಸ್‌ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಹಸ್ಸನ್‌ ಝಕಾರಿಯಾ ತಿಳಿಸಿದ್ದಾರೆ. ಅಲ್ದೇ ಬ್ರಿಟನ್‌, UAE ಹಾಗೂ ಥೈಲ್ಯಾಂಡ್‌ಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಜನ ಮತದಾನಕ್ಕಾಗಿ ನೊಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಆ ರಾಷ್ಟ್ರಗಳಲ್ಲಿ ಮತ ಪಟ್ಟಿಗೆಗಳನ್ನ ಅಳವಡಿಕೆ ಮಾಡಲ್ಲ ಅಂತೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಏಪ್ರಿಲ್‌ 21ರಂದು ಎಲೆಕ್ಷನ್‌ ನಡೆಯಲಿದ್ದು, ಅದ್ರ ಭಾಗವಾಗಿ ಈ ಕ್ರಮ ಕೈಗೊಂಡಿದೆ.

-masthmagaa.com

Contact Us for Advertisement

Leave a Reply