ಪಾಕಿಸ್ತಾನ್ ಜಿಂದಾಬಾದ್ ರಿಂಗ್​ಟೋನ್ ಇಡಿ: ಅಧಿಕಾರಿಗಳಿಗೆ ಪಾಕ್ ಸರ್ಕಾರ ಆದೇಶ

masthmagaa.com:

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂಡುಕೋರರ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಸರ್ಕಾರದ ವಿರುದ್ಧ ಹೋರಾಟ ನಡೀತಾನೇ ಇದೆ. ಇದ್ರ ನಡುವೆ ಅಲ್ಲಿನ ಜನರಿಗೆ ದೇಶಭಕ್ತಿ ಮೂಡಿಸಲು ಪಾಕಿಸ್ತಾನ ಮುಂದಾಗಿದೆ. ಅದಕ್ಕಾಗಿ ಬಲೂಚಿಸ್ತಾನದ ಹಿರಿಯ ಅಧಿಕಾರಿಗಳಿಗೆ ಸರ್ಕಾರ ಒಂದು ಫರ್ಮಾನು ಹೊರಡಿಸಿದೆ. ಎಲ್ಲರೂ ಪಾಕಿಸ್ತಾನ ಜಿಂದಾಬಾದ್ ಅಂತ ರಿಂಗ್ ಟೋನ್ ಇಟ್ಕೋಬೇಕು. ಕಾಲರ್ ಟೋನ್ ಕೂಡ ಅದೇ ಇರಬೇಕು ಅಂತ ಕಟ್ಟಪ್ಪಣೆ ಮಾಡಿದೆ. ಬಲೂಚಿಸ್ತಾನ ಪ್ರಾಂತ್ಯದ ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅಡ್ಮಿನಿಸ್ಟ್ರೇಟಿವ್ ಸೆಕ್ರೆಟರಿ, ಅಡಿಷನಲ್ ಸೆಕ್ರೆಟರಿ​ ಮತ್ತು ಡೆಪ್ಯುಟಿ ಸೆಕ್ರೆಟರಿಗಳು ಸೇರಿದಂತೆ ಸರ್ಕಾರದ ಎಲ್ಲಾ ವಿಭಾಗಗಳ ಮಖ್ಯಸ್ಥರಿಗೆ ಈ ರೂಲ್ಸ್ ಅನ್ವಯವಾಗುತ್ತೆ ಅಂತ ತಿಳಿಸಲಾಗಿದೆ. ಜೊತೆಗೆ ಕಾಲರ್​ಟೋನ್​ಗಳನ್ನು ಸೆಟ್ ಮಾಡೋದು ಹೇಗೆ ಅಂತ ಕೂಡ ನೋಟಿಫಿಕೇಶನ್​​ನಲ್ಲಿ ವಿವರಿಸಲಾಗಿದೆ. ಅಂದಹಾಗೆ ಪಾಕಿಸ್ತಾನ್ ಜಿಂದಾಬಾದ್ ಅನ್ನೋದು ಗಾಯಕ, ಸಂಗೀತ ನಿರ್ದೇಶಕ ಸಾಹಿರ್ ಅಲಿ ಬಗ್ಗಾ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್​​​ ಜೊತೆ ಸೇರಿಕೊಂಡು ಈ ಸಾಂಗ್ ನಿರ್ಮಿಸಿದ್ದಾರೆ. ಇದನ್ನು 2019ರ ಮಾರ್ಚ್​ 23ರಂದು ಐಎಸ್​ಪಿಆರ್​ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply