ಯೋಧರ ಗುಂಡಿಗೆ ನಾಗರಿಕರು ಬಲಿ: ಹಬ್ಬುತ್ತಿದೆ ಪ್ರತಿಭಟನೆಯ ಕಿಚ್ಚು!

masthmagaa.com:
ನಾಗಾಲ್ಯಾಂಡ್​​ನಲ್ಲಿ ಯೋಧರ ಗುಂಡಿಗೆ ನಾಗರಿಕರು ಬಲಿಯಾದ ಪ್ರಕರಣ ದಿನದಿಂದ ದಿನಕ್ಕೆ ದೊಡ್ಡದಾಗ್ತಿದೆ. ಮೋನ್ ಜಿಲ್ಲೆಗೆ ಸೀಮಿತವಾಗಿದ್ದ ಪ್ರತಿಭಟನೆ ಈಗ ಇಡೀ ರಾಜ್ಯಕ್ಕೆ ಹರಡುತ್ತಿದೆ. ನಾಗಾಲ್ಯಾಂಡ್​​ನ ಪೂರ್ವ ಭಾಗದಾದ್ಯಂತ ಪ್ರತಿಭಟನೆ ಕಿಚ್ಚು ಜೋರಾಗಿದ್ದು, ನ್ಯಾಯಕ್ಕೆ ಜನ ಆಗ್ರಹಿಸಿದ್ದಾರೆ. ಕೋನ್ಯಾಕ್ ನಾಗಾ ಟ್ರೈಬ್​ ಇಷ್ಟು ದಿನ ಪ್ರತಿಭಟನೆ ಹಮ್ಮಿಕೊಳ್ತಿತ್ತು. ಈಗ ಪೂರ್ವ ನಾಗಾಲ್ಯಾಂಡ್​ನ ಐದು ಜಿಲ್ಲೆಗಳಲ್ಲಿರೋ ವಿವಿಧ ಬುಡಕಟ್ಟು ಜನಾಂಗದ ಸಂಘಟನೆಯಾದ ಈಸ್ಟರ್ನ್​ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಕೂಡ ಬೆಂಬಲ ಸೂಚಿಸಿದೆ. ಈ ಎಲ್ಲಾ ಭಾಗಗಳಲ್ಲಿ ಸೇನೆಯೊಂದಿಗೆ ಜನ ಅಸಹಕಾರ ಚಳವಳಿ ಶುರು ಮಾಡ್ಕೊಂಡಿದ್ದಾರೆ.
-masthmagaa.com

Contact Us for Advertisement

Leave a Reply