ರಾಜ್ಯದಲ್ಲಿ ಮತ್ತೂ ಐವರಿಗೆ ಒಮೈಕ್ರಾನ್ ಕೊರೋನಾ!

masthmagaa.com:

ರಾಜ್ಯದಲ್ಲಿ ಮತ್ತೂ ಐವರಲ್ಲಿ ಒಮೈಕ್ರಾನ್ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಧಾರವಾಡ, ಶಿವಮೊಗ್ಗ, ಮಂಗಳೂರಿನಲ್ಲಿ ತಲಾ ಒಬ್ಬೊಬ್ಬರಿಗೆ ಮತ್ತು ಉಡುಪಿಯಲ್ಲಿ ಇಬ್ಬರಿಗೆ ಒಮೈಕ್ರಾನ್ ಸೋಂಕು ಅಂಟಿದೆ ಅಂತ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇನ್ನು ರಾಜ್ಯದ ಲಸಿಕೆ ಅಭಿಯಾನ 100 ಪರ್ಸೆಂಟ್​​ನತ್ತ ಸಾಗುತ್ತಿದೆ. 96.26 ಮಂದಿಗೆ ಈಗಾಗಲೇ ಫಸ್ಟ್​​ ಡೋಸ್ ಲಸಿಕೆ ಹಾಕಿಯಾಗಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದೀವಿ. ಇನ್ನು 73 ಪರ್ಸೆಂಟ್ ಜನರಿಗೆ ಎರಡೂ ಡೋಸ್ ಲಸಿಕೆ ಹಾಕಿದ್ದು, ದೇಶದಲ್ಲೇ 3ನೇ ಸ್ಥಾನದಲ್ಲಿದ್ದೀವಿ ಅಂತ ಟ್ವೀಟ್ ಮಾಡಿದ್ದಾರೆ.
ನಮ್ಮ ಪಕ್ಕದ ಕೇರಳ ಮತ್ತು ಅತ್ತ ದೆಹಲಿಯಲ್ಲಿ ಹೊಸದಾಗಿ ತಲಾ ನಾಲ್ಕು ಒಮೈಕ್ರಾನ್​ ಕೇಸ್​ ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಒಟ್ಟು 161 ಕೇಸ್​ ದೃಢಪಟ್ಟಂತಾಗಿದೆ.

-masthmagaa.com

Contact Us for Advertisement

Leave a Reply