ಒಮೈಕ್ರಾನ್ ಕುರಿತ ಇವತ್ತಿನ ಅಪ್​ಡೇಟ್ ಇಲ್ಲಿದೆ ನೋಡಿ..

masthmagaa.com:

ಒಮೈಕ್ರಾನ್​ ಮತ್ತು ಕೊರೋನಾ ಪ್ರಕರಣಗಳು ಹೆಚ್ಚು ವರದಿಯಾಗ್ತಿರೋ ಹಾಗೂ ವ್ಯಾಕ್ಸಿನೇಷನ್​ ವೇಗ ಕಮ್ಮಿ ಇರೋ 10 ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಲ್ಟಿ ಡಿಸಿಪ್ಲಿನರಿ ಸೆಂಟ್ರಲ್​ ಟೀಮ್​​ಗಳನ್ನ ನಿಯೋಜಿಸಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಮಿಝೋರಾಂ, ಕರ್ನಾಟಕ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್​ ಮತ್ತು ಪಂಜಾಬ್​ ರಾಜ್ಯಗಳಲ್ಲಿ ಈ ಟೀಮ್​​ಗಳನ್ನ ನಿಯೋಜಿಸಲಾಗಿದೆ.

– ದುಬೈನಿಂದ ಮುಂಬೈಗೆ ಬರುವ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಹೋಂ ಕ್ವಾರಂಟೈನ್​​ಗೆ ಒಳಪಡಿಸುವ ನಿಯಮ ಜಾರಿಗೆ ಬಂದಿದೆ.

– ಗ್ಲೋಬಲ್​ ಟ್ರೆಂಡ್ಸ್ ನೋಡಿದ್ರೆ ಇನ್ನು ಎರಡ್ಮೂರು ವಾರಗಳಲ್ಲಿ ದೇಶದ ಒಮೈಕ್ರಾನ್​​ ಕೇಸಸ್​ ಒಂದು ಸಾವಿರ ದಾಟಲಿದೆ. ಎರಡು ತಿಂಗಳಲ್ಲಿ 10 ಲಕ್ಷ ದಾಟುವ ಸಾಧ್ಯತೆ ಇದೆ. ಭಾರತದಲ್ಲಿ ದೊಡ್ಡ ಔಟ್​ಬ್ರೇಕ್​ ಆಗೋಕೆ ನಮ್ಮ ಬಳಿ ಹೆಚ್ಚಿನ ದಿನಗಳಿಲ್ಲ. ಈ ಔಟ್​​ಬ್ರೇಕ್​ ಅನ್ನ ತಪ್ಪಿಸಬೇಕು ಅಂತ ಕೇರಳದ ಕೋವಿಡ್​ ಎಕ್ಸ್​ಪರ್ಟ್ ಕಮಿಟಿಯ ಸದಸ್ಯರೊಬ್ರು ಹೇಳಿದ್ದಾರೆ.

– ಇನ್ನು ಭಾರತದಲ್ಲಿ ಜನವರಿ ಅಂತ್ಯದ ವೇಳೆಗೆ ಕೊರೋನಾ ಕೇಸಸ್​​ ಹೆಚ್ಚಾಗೋ ಸಾಧ್ಯತೆ ಇದೆ. ಜಗತ್ತು ಏನನ್ನ ಎದುರಿಸುತ್ತಿದಿಯೋ ಅದನ್ನ ನಾವು ಕೂಡ ಎದುರಿಸ್ತೀವಿ. ಒಂದೇ ಒಂದು ಹೋಪ್​ ಅಂದ್ರೆ, ಎರಡನೇ ಅಲೆ ಥರ ಗಂಭೀರ ಪ್ರಮಾಣದ ರೋಗಿಗಳ ಸಂಖ್ಯೆ ಹೆಚ್ಚಾಗದೇ ಇದ್ರೆ ಸಾಕು ಅಂತ ಹೈದ್ರಾಬಾದ್​ನ ಕಿಮ್ಸ್ ಆಸ್ಪತ್ರೆ ನಿರ್ದೇಶಕರು ಹೇಳಿದ್ದಾರೆ.

– ಈಗಿನ ವಿಚಾರಕ್ಕೆ ಬಂದ್ರೆ ದೇಶದಲ್ಲಿ ಒಮೈಕ್ರಾನ್ ರೂಪಾಂತರಿ ಕೊರೋನಾ ಪ್ರಕರಣಗಳ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 108 ಕೇಸ್​ ದೃಢಪಟ್ಟಿದೆ. ಅದ್​ಬಿಟ್ರೆ, ದೆಹಲಿ 79, ಗುಜರಾತ್​ 43, ತೆಲಂಗಾಣ 38, ಕೇರಳ 37, ತಮಿಳುನಾಡು 34, ಕರ್ನಾಟಕ 31 ಹೀಗೆ.. ಒಟ್ಟು 415 ಸೋಂಕಿತರಲ್ಲಿ 115 ಜನ ಗುಣಮುಖ ಕೂಡ ಆಗಿದ್ದಾರೆ.

– ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ರೂಲ್ಸ್ ಉಲ್ಲಂಘಿಸಿದ್ದಕ್ಕಾಗಿ ಕಳೆದೆರಡು ದಿನಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಅಂತ ದೆಹಲಿ ಸರ್ಕಾರ ಹೇಳಿದೆ. ಜೊತೆಗೆ 163 ಎಫ್​ಐಆರ್​ಗಳನ್ನ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply