ಶಾಲಾ ಕಾಲೇಜುಗಳಲ್ಲಿ ನಶಾವಸ್ತು ಹಾವಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರ ಮಾಸ್ಟರ್‌ ಪ್ಲಾನ್‌!

masthmagaa.com:

ಶಾಲಾ ಕಾಲೇಜುಗಳಲ್ಲಿ ನಶಾ ವಸ್ತುಗಳ ಹಾವಳಿ ಹೆಚ್ಚಾಗ್ತಿದೆ. ಹೀಗಾಗಿ ಇದನ್ನ ತಡೆಗಟ್ಟೋಕೆ ಬೆಂಗಳೂರು ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಾ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳ ಪಿಟಿ ಮಾಸ್ಟರ್ ಅಥವಾ ಹೆಡ್​ಮಾಸ್ಟರ್​ ಅವ್ರನ್ನ ನೋಡಲ್ ಆಫೀಸರ್​​ ಆಗಿ ನೇಮಿಸಲು ಮುಂದಾಗಿದ್ದಾರೆ. ಇನ್ನು ಶಾಲೆಯ ಸಮಯದಲ್ಲಿ ಮತ್ತು ಬಳಿಕ ಶಾಲೆಯ ಸುತ್ತಮುತ್ತ ಅಂಗಡಿಗಳು, ಸಂದೇಹಾಸ್ಪದ ಸ್ಥಳಗಳ ಮೇಲೆ ಹಾಗೂ ವಿದ್ಯಾರ್ಥಿಗಳ ಚಟುವಟಿಕೆ ಮೇಲೆ ನಿಗಾ ಇಡಬೇಕು. ವಿದ್ಯಾರ್ಥಿಗಳು ಎಲ್ಲೆಲ್ಲಿ ಓಡಾಡುತ್ತಾರೆ, ಶಾಲೆಯ ಹೊರಗೆ ಯಾರನ್ನ ಭೇಟಿಯಾಗ್ತಾರೆ ಅನ್ನೋದ್ರ ಬಗ್ಗೆ ಗಮನ ಇಡಬೇಕು. ಅನುಮಾನಸ್ಪದ ವ್ಯಕ್ತಿಗಳು ಶಾಲಾ ಕಾಲೇಜು ಬಳಿ ಕಂಡುಬಂದ್ರೆ ಮಾಹಿತಿ ನೀಡ್ಬೇಕು. ಅವರು ಪ್ರತಿದಿನ ಬರ್ತಾರಾ? ಅಥ್ವಾ ಒಂದು ದಿನ ಮಾತ್ರ ಬಂದಿದ್ದರಾ? ವಾರಕ್ಕೆ ಎಷ್ಟು ಸಲ ಬರ್ತಾರೆ ಅನ್ನೋದನ್ನ ಗಮನಿಸಬೇಕು ಅಂತ ಪಿಟಿ ಮಾಸ್ಟರ್ ಅಥವಾ ಹೆಡ್ ಮಾಸ್ಟರ್​​ಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply